ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನಿಗೆ ಭಕ್ತಿ, ಜ್ಞಾನ ಅಗತ್ಯ: ಮಹಾದೇವ ಸ್ವಾಮೀಜಿ ಅಭಿಮತ

ಸಾಯಿ ದೀಪೋತ್ಸವ ಸತ್ಸಂಗ ಕಾರ್ಯಕ್ರಮ
Last Updated 13 ಡಿಸೆಂಬರ್ 2018, 15:47 IST
ಅಕ್ಷರ ಗಾತ್ರ

ತುಮಕೂರು: ಮನುಷ್ಯನು ಭಕ್ತಿ ಅಥವಾ ಜ್ಞಾನ ಎಂಬ ನೌಕೆಯ ಸಹಾಯದೊಂದಿಗೆ ಮುಕ್ತಿ ಎಂಬ ದಡ ಸೇರುವುದಕ್ಕೆ ಪ್ರಯತ್ನಿಸಬೇಕು ಎಂದು ವಿಜಯಪುರದ ಬಸವಕಲ್ಯಾಣ ಪೀಠಾಧ್ಯಕ್ಷ ಮಹಾದೇವ ಸ್ವಾಮೀಜಿ ನುಡಿದರು.

ನಗರದ ಜಯನಗರದ ಪೂರ್ವ ಬಡಾವಣೆಯ ಶಿರಡಿ ಸಾಯಿ ಮಂದಿರಲ್ಲಿ ಸಾಯಿಚೇತನ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಸಾಯಿ ದೀಪೋತ್ಸವ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಂಸಾರ ಸಮುದ್ರವಿದ್ದಂತೆ. ಅದನ್ನು ದಾಟಿ ಸಾಗಬೇಕಾದರೆ ಒಂದು ದೋಣಿ ಬೇಕು. ಅದೇ ಜ್ಞಾನ ಮತ್ತು ಭಕ್ತಿ. ಆದರೆ ದೋಣಿಯನ್ನು ನಡೆಸಲು ತಳ್ಳುಗೋಲು ಬೇಕಾಗುತ್ತದೆ. ಹಾಗೇ ಸದ್ಗುರುವಿಲ್ಲದೆ ಯಾರೂ ಈ ಸಾಗರದಲ್ಲಿ ಮುಂದೆ ಸಾಗಲಾರರು ಎಂದು ಅಭಿಪ್ರಾಯಪಟ್ಟರು.

ದೀಪೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಬಾಬಾರ ಪಲ್ಲಕ್ಕಿ ಉತ್ಸವ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT