ಮತ್ತೆ ಬಂತು ಶ್ರಾವಣ; ಒಳ್ಳೆಯ ವ್ಯಾಪಾರದ ನಿರೀಕ್ಷೆ

7
ಮುಗಿದ ಆಷಾಢ ಮಾಸ; ಹೂವಿನ ಬೆಲೆ ಏರಿಕೆ, ಒಂದೆರಡು ವಾರಗಳಿಂದ ಸ್ಥಿರವಾಗಿರುವ ತರಕಾರಿ, ಹಣ್ಣಿನ ಬೆಲೆಗಳು

ಮತ್ತೆ ಬಂತು ಶ್ರಾವಣ; ಒಳ್ಳೆಯ ವ್ಯಾಪಾರದ ನಿರೀಕ್ಷೆ

Published:
Updated:
Deccan Herald

ತುಮಕೂರು: ಆಷಾಢ ಮಾಸ ಕೊನೆ ಹಾಗೂ ಶ್ರಾವಣ ಮಾಸ ಪ್ರಾರಂಭದ ಹಿನ್ನೆಲೆ ಹೂವಿನ ಬೆಲೆಯಲ್ಲಿ ಏರಿಕೆ ಕಂಡಿದ್ದರೆ ತರಕಾರಿ ಹಾಗೂ ಹಣ್ಣಿನ ಬೆಲೆ ಸ್ಥಿರವಾಗಿದೆ.

ರುದ್ರಾಕ್ಷಿ, ಬಟನ್ಸ್ ಹೂವು 20 ಮಾರಿಗೆ ₹ 1000 ಕ್ಕೆ ಮಾರಾಟವಾಗುತ್ತಿದ್ದು, ₹ 300- 400 ಏರಿಕೆ ಕಂಡಿದೆ. ಇನ್ನೂ ಕನಕಾಂಬರ 20 ಮಾರಿಗೆ ₹ 1000, ಕಣದಲ ಹೂವು ₹ 500, ಕಾಕಡ ಕೆಜಿಗೆ ₹ 200-250ಕ್ಕೆ ಮಾರಾಟವಾಗುತ್ತಿದೆ. ಕ್ರಮೇಣ ಕಳೆದ ವಾರ ₹ 700-800, ₹ 400-300 ಹಾಗೂ ₹ 120-180ಗೆ ಮಾರಾಟವಾಗುತ್ತಿತ್ತು.

ಚೆಂಡು ಹೂವು ಕೆಜಿಗೆ ₹ 20-30, ಮಾರಿಗೋಲ್ಡ್ ₹ 70-90, ಗುಲಾಬಿ ₹ 70-80, ಸೇವಂತಿಗೆ ₹ 70-85, ಬಿಳಿ ಸೇವಂತಿಗೆ ₹ 80-100 ಗೆ ಮಾರಾಟವಾಗುತ್ತಿದೆ.

ಇದು ಅಂತರಸನಹಳ್ಳಿ ಮಾರುಕಟ್ಟೆಯಲ್ಲಿರುವ ಬೆಲೆ ಸ್ಥಿತಿ. ಇಲ್ಲಿ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಶ್ರೀನಿವಾಸಪುರ, ಬೆಂಗಳೂರು, ದಾಬಸ್ ಪೇಟೆ, ಶಿವಮೊಗ್ಗ ಸೇರಿದಂತೆ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಮಾಲು ಬರುತ್ತಿವೆ. ಶುಕ್ರವಾರ ಆಟೋ, ಬೈಕ್ ಸೇರಿದಂತೆ ವಿವಿಧ ವಾಹನಗಳಲ್ಲಿ ರೈತರು ಹೂವುಗಳ ಚೀಲಗಳನ್ನು ಮಾರುಕಟ್ಟೆಗೆ ತರಲಾಗುತ್ತಿದೆ.

ಮಾರುಕಟ್ಟೆಯಲ್ಲಿ ದಿನನಿತ್ಯ ಸಾವಿರಾರು ಜನರು ವ್ಯಾಪಾರ ಮಾಡುತ್ತಿದ್ದರೂ ಆದರೆ ಆಷಾಢ ಮಾಸವಾಗಿದ್ದರಿಂದ ಗ್ರಾಹಕರು ಈ ಕಡೆ ತಲೆಹಾಕದೇ ಇರುವುದರಿಂದ ರೈತರು  ಹಾಗೂ ಅಂಗಡಿ ವ್ಯಾಪಾರಿಗಳ ಮೊಗದಲ್ಲಿ ನಿರಾಶೆ ಕವಿದಿತ್ತು.

ಆದರೆ ಈಗ ಶ್ರಾವಣ ಮಾಸದ ಪ್ರಾರಂಭ ಹಾಗೂ ಶನಿವಾರ (ಆಗಸ್ಟ್ 11) ಅಮಾವಾಸ್ಯೆ ಇರುವ ಕಾರಣ ಶುಕ್ರವಾರ ರೈತರು ಹಾಗೂ ಗ್ರಾಹಕರ ಸಂಖ್ಯೆ ಮಾರುಕಟ್ಟೆಯಲ್ಲಿ ಹೆಚ್ಚಾಗಿರುವುದು ಕಂಡು ಬಂದಿತು.

ತರಕಾರಿ ಬೆಲೆ ಸ್ಥಿರ: 

ಕ್ಯಾರೇಟ್ ಕೆಜಿಗೆ ₹ 40-50, ಬೀಟ್ ರೂಟ್, ಈರುಳ್ಳಿ, ಹಸಿ ಮೆಣಸಿನಕಾಯಿ, ಹೀರೆಕಾಯಿ ಹಾಗೂ ಆಳಸಂದಿ ₹ 20-30, ಕ್ಯಾಪ್ಸಿಕಂ ₹ 40-60, ಬೀನ್ಸ್ ₹ 30-34, ಬೆಂಡೆಕಾಯಿ ಹಾಗೂ ಆಲೂಗಡ್ಡೆ ₹ 20-25, ಬೋಂಡಾ ಮೆಣಸಿನಕಾಯಿ ₹ 30-36, ಹಾಗಲಕಾಯಿ ₹ 40 ಗೆ ಮಾರಾಟವಾಗುತ್ತಿದೆ.

ಬದನೆಕಾಯಿ ₹ 15, ಹೂಕೋಸು ₹ 20, ಎಲೆಕೋಸು ₹ 15-20, ಬೆಳ್ಳುಳ್ಳಿ ₹ 35-50, ಶುಂಠಿ ₹ 40-60 ಹಾಗೂ ಸೌತೆ ಕಾಯಿ ಚೀಲಕ್ಕೆ ₹ 200 ಮತ್ತು ಬಟಾಣಿ ₹ 50-60 ಗೆ ಮಾರಾಟವಾಗುತ್ತಿದೆ.

ಟೊಮೆಟೊ ಹಾಗೂ ಮೂಲಂಗಿ ಬೆಲೆ ಕನಿಷ್ಠ ಮಟ್ಟಕ್ಕೆ ಕುಸಿತ

ಟೊಮೆಟೊ ಚೀಲಕ್ಕೆ ₹ 50-60 ಹಾಗೂ ಕೆಜಿ ₹ 5-15 ಕುಸಿತ ಕಂಡಿದ್ದರೆ, ಮೂಲಂಗಿ ಕೆಜಿ ₹ 4-8 ಗೆ ಸಿಗುತ್ತಿದೆ. ಕಳೆದ ಒಂದೆರಡು ವಾರಗಳಿಂದ ತರಕಾರಿ ಬೆಲೆ ಸ್ಥಿರವಾಗಿಯೇ ಇದೆ ಎಂದು ತರಕಾರಿ ವ್ಯಾಪಾರಿ ವೇಣು ತಿಳಿಸಿದರು.

ಸೊಪ್ಪಿನ ಬೆಲೆ ಅತ್ಯಲ್ಪ ಏರಿಕೆ:

ಕಳೆದ ವಾರಕ್ಕಿಂತ ಈ ವಾರ ಸೊಪ್ಪಿನ ವ್ಯಾಪಾರ ಹೆಚ್ಚಾಗಿದ್ದು, ಕೊತ್ತಂಬರಿ ₹ 20-30, ಪುದಿನಾ ₹ 25-30, ಸಬ್ಬಸಗಿ ₹ 20, ಮೆಂತೆ ₹ 30, ದಂಡಿಸೊಪ್ಪು ₹ 30, ಪಾಲಕ್ ಕಟ್ಟಿಗೆ ₹ 20-25 ಹಾಗೂ ಕೆರಬೇವು ₹ 20-30 ಗೆ ಮಾರಾಟವಾಗುತ್ತಿದೆ.

ಹಣ್ಣುಗಳ ವ್ಯಾಪಾರವೂ ಸ್ಥಿರ:

ಸೇಬು ಕೆಜಿಗೆ ₹ 140-160, ಮರಸೇಬು ಹಾಗೂ ದಾಳಿಂಬೆ ₹ 100-120, ಮೂಸಂಬಿ ₹ 70-100, ದ್ರಾಕ್ಷಿ ₹ 140-150, ಕಲ್ಲಂಗಡಿ ₹ 15-20, ಪರಂಗಿ ₹ 20-30, ಪೈನ್ ಆ್ಯಪಲ್ ₹ 40-60 ಮಾರಾಟವಾಗುತ್ತಿದೆ.

ಶುಕ್ರವಾರ ಹಣ್ಣುಗಳ ವ್ಯಾಪಾರ ಕಡಿಮೆ ಆಗಿರುವುದು ಕಂಡು ಬಂದಿತಾದರೂ ಶ್ರಾವಣ ಮಾಸ ಪ್ರಾರಂಭವಾಗುತ್ತಿರುವುದರಿಂದ ವ್ಯಾಪಾರ ಹೆಚ್ಚಾಗಬಹುದು ಎಂಬ ನಿರೀಕ್ಷೆಯಿಂದ ಭರ್ಜರಿಯಾಗಿ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !