ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಉಚಿತ ಮಾಸ್ಕ್‌

ಜಿಲ್ಲಾ ಸ್ಕೌ‌ಟ್ಸ್ ಅಂಡ್ ಗೈಡ್ಸ್‌ನಿಂದ ₹1.50 ಲಕ್ಷದ ಮಾಸ್ಕ್‌ ವಿತರಣೆ
Last Updated 21 ಮೇ 2020, 15:26 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಸ್ಕೌ‌ಟ್ಸ್ ಅಂಡ್ ಗೈಡ್ಸ್ ವತಿಯಿಂದ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ 23,500 ವಿದ್ಯಾರ್ಥಿಗಳಿಗಾಗಿ 24,000 ಮಾಸ್ಕ್‌ಗಳನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಯಿತು.

₹1.50 ಲಕ್ಷ ಮೌಲ್ಯದ ಈ ಮಾಸ್ಕ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸಮ್ಮುಖದಲ್ಲಿ ಗುರುವಾರ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕಾಮಾಕ್ಷಮ್ಮ ಸ್ವೀಕರಿಸಿದರು.

‘ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯಸ್ಥರಾಗಿರುವ ಪಿ.ಜಿ.ಆರ್.ಸಿಂಧ್ಯ ಸಮಯೋಚಿತವಾಗಿ ನಿರ್ಧಾರ ಕೈಗೊಂಡು ರಾಜ್ಯದ 2.50 ಲಕ್ಷ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಾಲದಲ್ಲಿ ಮಾಸ್ಕ್ ವಿತರಿಸುತ್ತಿರುವುದು ಶ್ಲಾಘನೀಯ’ ಎಂದು ಸಚಿವರು ಹೇಳಿದರು.

‘ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಒಂದು ಜತೆ ಮಾಸ್ಕ್ ನೀಡಿದರೆ ಒಳ್ಳೆಯದು. ಸ್ಕೌಟ್ಸ್‌ನಿಂದ ಒಂದು ಮಾಸ್ಕ್ ನೀಡಿದರೆ, ಸರ್ಕಾರವು ಪ್ರತಿ ವಿದ್ಯಾರ್ಥಿಗೆ ಮತ್ತೊಂದು ಮಾಸ್ಕ್ ನೀಡುವ ವ್ಯವಸ್ಥೆ ಮಾಡಲಿದೆ’ ಎಂದು ಸಚಿವರು ತಿಳಿಸಿದರು.

‘ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಜಾಸ್ತಿಯಾಗುತ್ತಿದೆ. ದುಡಿಯಲು ಮಹಾರಾಷ್ಟ್ರ ಮತ್ತು ಬೇರೆ ರಾಜ್ಯಗಳಿಗೆ ಹೋಗಿದ್ದವರು ಜಿಲ್ಲೆಗೆ ಬರುತ್ತಿದ್ದಾರೆ. ಅವರನ್ನು ತಡೆಯಲಾಗುವುದಿಲ್ಲ. ಆದರೆ, ಹೊರಗಡೆಯಿಂದ ಬರುವವರಿಗೆ ಗಡಿ ಭಾಗದಲ್ಲೇ ತಪಾಸಣೆ ನಡೆಸಿ ಸೋಂಕು ಕಂಡುಬಂದಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ’ ಎಂದರು.

ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತರಾದ ಆಶಾ ಪ್ರಸನ್ನಕುಮಾರ್, ಜಿಲ್ಲಾ ಆಯುಕ್ತ ವೇಣುಗೋಪಾಲಕೃಷ್ಣ, ಸುಭಾಷಿಣಿ, ಆರ್.ಕುಮಾರ್, ಕಾರ್ಯದರ್ಶಿ ಎ.ಷಾ.ಸುರೇಂದ್ರ, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT