ಹಿರಿಯ ನಟಿ ಬಿ.ಜಯಶ್ರೀಗೆ #MeToo ಅನುಭವ

7

ಹಿರಿಯ ನಟಿ ಬಿ.ಜಯಶ್ರೀಗೆ #MeToo ಅನುಭವ

Published:
Updated:

ತುಮಕೂರು: ‘ಮಿಟೂ ಅನುಭವ ನನಗೂ ಆಗಿದೆ. ನನ್ನ ಕಾಲದಲ್ಲಿ ಅದನ್ನು ಅನುಭವಿಸಿದ್ದೇನೆ. ನನ್ನ ಆತ್ಮಚರಿತ್ರೆ ‘ಕಣ್ಣಾಮುಚ್ಚೆ ಕಾಡೇಗೂಡೆ’ ಪುಸ್ತಕದಲ್ಲಿ ಹೇಳಿದ್ದೇನೆ’ ಎಂದು ಹಿರಿಯ ಕಲಾವಿದೆ ಬಿ.ಜಯಶ್ರೀ ಹೇಳಿದರು.

ನಗರದಲ್ಲಿ ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
‘ಮಿಟೂ ಅನುಭವ ವೈಯಕ್ತಿಕದಾದುದು. ಅದನ್ನು ಯಾಕೆ ಹೇಳಿಕೊಳ್ಳಬೇಕು ಎಂಬುದು ನನ್ನ ಪ್ರಶ್ನೆ. ಏನಾದರೂ ಆಗಿದ್ದರೆ ಇಬ್ಬರಿಗೆ ಮಾತ್ರ ಗೊತ್ತಿರುತ್ತದೆ' ಎಂದು ಹೇಳಿದರು.

‘ಮಿಟೂಗೆ ಸಂಬಂಧಿಸಿದಂತೆ ಎಷ್ಟರ ಮಟ್ಟಿಗೆ ಸಾಕ್ಷಿ ಒದಗಿಸುತ್ತೀರಿ ಎಂಬುದೇ ಪ್ರಶ್ನೆಯಾಗಿದೆ. ಉದಾಹರಣೆಗೆ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಎಷ್ಟೊಂದು ಪ್ರಶ್ನೆ ಕೇಳ್ತಾರೆ. ಅದಕ್ಕೆ ಉತ್ತರಿಸುವಾಗ ಸಾಕಷ್ಟು ನೋವು ಆಗುತ್ತದೆಯಲ್ಲವೆ’ ಎಂದು ಹೇಳಿದರು.

‘ಅಭಿಪ್ರಾಯ ಸ್ವಾತಂತ್ರ್ಯದ ಹೆಸರಿನಲ್ಲಿ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನಸೋ ಇಚ್ಛೆ ಹೇಳಿಕೊಳ್ಳಲಾಗುತ್ತಿದೆ. ಹೀಗೆ ಅಭಿಪ್ರಾಯ ಹಂಚಿಕೊಳ್ಳುವಾಗಲೂ ಒಂದು ಲಕ್ಷ್ಮಣ ರೇಖೆಯನ್ನು ಹಾಕಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 45

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !