ಕೋರ್ಟ್‌ಗೆ ದೂರು ಸಲ್ಲಿಸಿದರೆ ತಿರಸ್ಕಾರ: ಎಸ್.ಎಸ್. ಪಟ್ಟಣಶೆಟ್ಟಿ

7
ಗ್ರಾಹಕರ ಕುಂದುಕೊರತೆ ನಿವಾರಣಾ ಸಭೆಯಲ್ಲಿ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ಆಯುಕ್ತ ಎಸ್.ಎಸ್.ಪಟ್ಟಣಶೆಟ್ಟಿ ಗ್ರಾಹಕರಿಗೆ ಎಚ್ಚರಿಕೆ

ಕೋರ್ಟ್‌ಗೆ ದೂರು ಸಲ್ಲಿಸಿದರೆ ತಿರಸ್ಕಾರ: ಎಸ್.ಎಸ್. ಪಟ್ಟಣಶೆಟ್ಟಿ

Published:
Updated:
Deccan Herald

ತುಮಕೂರು: ಗ್ರಾಹಕರು ವಿದ್ಯುತ್ ದೂರುಗಳನ್ನು ನೇರವಾಗಿ ಹೈಕೋರ್ಟಿನಲ್ಲಿ ಸಲ್ಲಿಸಿದರೆ ಕೋರ್ಟ್ ತಿರಸ್ಕರಿಸುತ್ತದೆ. ಹೀಗಾಗಿ, ಗ್ರಾಹಕರು ತಮ್ಮ ದೂರುಗಳನ್ನು ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಯಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದು ಕರ್ನಾಟಕ ವಿದ್ಯುತ್‌ ಶಕ್ತಿ ನಿಯಂತ್ರಣ ಆಯೋಗದ ಆಯುಕ್ತ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.

ನಗರದ ಎಸ್.ಐ.ಟಿ. ಬಿರ್ಲಾ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಹಾಗೂ ಗ್ರಾಹಕರ ಕುಂದುಕೊರೆತೆಗಳ ನಿವಾರಣಾ ವೇದಿಕೆ ಆಯೋಜಿಸಿದ್ಧ ಗ್ರಾಹಕರ ಕುಂದುಕೊರತೆ ನಿವಾರಣಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಹಕರಿಂದ ಬರುವ ದೂರುಗಳ ಸ್ವೀಕಾರಕ್ಕೆ ಇಂಧನ ಇಲಾಖೆಯು 1912 ಸಂಖ್ಯೆ ಸಹಾಯವಾಣಿ ತೆರೆದಿದೆ. ಇದಕ್ಕೆ ಬರುವ ದೂರುಗಳನ್ನು ಸ್ವೀಕರಿಸಿ ಅಧಿಕಾರಿಗಳು ಮತ್ತು ದೂರು ನೀಡಿದ ಗ್ರಾಹಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿ 60 ದಿನಗಳ ಒಳಗೆ ಇತ್ಯರ್ಥಗೊಳಿಸಬೇಕು. ಒಂದು ವೇಳೆ ವೇದಿಕೆ ನೀಡಿದ ತೀರ್ಪು ತೃಪ್ತಿಯಾಗದಿದ್ದಲ್ಲಿ ವಿದ್ಯುತ್ ಲೋಕ ಪಾಲಕರು (ಓಂಬುಡ್ಸ್‌ಮನ್) ಅವರಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದರು.

ಮೇಲ್ಮನವಿಯನ್ನು ಮುಂದಿನ 60 ದಿನಗಳಲ್ಲಿ ಇತ್ಯರ್ಥಗೊಳಿಸಬೇಕು. ಒಂದು ವೇಳೆ ಓಂಬುಡ್ಸ್‌ಮನ್ ನೀಡುವ ತೀರ್ಪು ತೃಪ್ತಿ ತರದಿದ್ದಲ್ಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಇದನ್ನು ಅನುಸರಿಸದೇ ನೇರವಾಗಿ ಹೈಕೋರ್ಟ್ ಮೊರೆ ಹೋದರೆ ಕೋರ್ಟ್ ತಿರಸ್ಕರಿಸುತ್ತದೆ ಎಂದು ಎಚ್ಚರಿಕೆ ನೀಡಿದರು.

ಗುಣಮಟ್ಟದ ಸೇವೆ ಒದಗಿಸಿ

ಗುಣಮಟ್ಟದ ಸೇವೆ ಒದಗಿಸುವ ಮೂಲಕ ವಿದ್ಯುತ್ ಇಲಾಖೆ ಗ್ರಾಹಕರ ಹಿತ ಕಾಪಾಡುವುದು ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ. ಅಧಿಕಾರಿಗಳು ವಿದ್ಯುತ್ ಸರಬರಾಜು ಮಾಡುವಾಗ ಚಾಲ್ತಿಯಲ್ಲಿರುವ ನಿಯಮ ಪಾಲಿಸುವುದರ ಜೊತೆ ಜೊತೆಗೆ ನಿಗದಿತ ಅವಧಿಯೊಳಗೆ ಗ್ರಾಹಕರ ದೂರು, ದುಮ್ಮಾನಗಳನ್ನು ನಿವಾರಿಸುವ ಮೂಲಕ ಗ್ರಾಹಕರಿಗೆ ಅನಗತ್ಯ ಹೊರೆಯಾಗದಂತೆ ಗಮನಹರಿಸಬೇಕು ಎಂದು ಎಸ್.ಎಸ್. ಪಟ್ಟಣಶೆಟ್ಟಿ ಸೂಚಿಸಿದರು.

ಬೆಸ್ಕಾಂ ಚಿತ್ರದುರ್ಗ ಮುಖ್ಯ ಎಂಜಿನಿಯರ್ ಗುರುಮೂರ್ತಿ, ಲೆಕ್ಕ ನಿಯಂತ್ರಣಾಧಿಕಾರಿ ಭೀಮಪ್ಪ ಚಿಣಗಿ, ದಾವಣೆಗೆ ಜಿಲ್ಲೆಯ ಅಧೀಕ್ಷಕ ಎಂಜಿನಿಯರ್ ಸುಭಾಷ್‌ಚಂದ್ರ, ತುಮಕೂರು ಅಧೀಕ್ಷಕ ಎಂಜಿನಿಯರ್ ನಾಗೇಂದ್ರ, ಚಿತ್ರದುರ್ಗ ಅಧೀಕ್ಷಕ ಎಂಜಿನಿಯರ್ ಶ್ರೀನಿವಾಸ್, ಬೆಸ್ಕಾಂ ಸಿ.ಆರ್. ವಿಭಾಗದ ಪ್ರಧಾನ ವ್ಯವಸ್ಥಾಪಕಿ ಜಯಂತಿ, ಸಿ.ಎ. ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಮಾಲಿನಿ, ಸಲಹಾ ಸಮಿತಿ ಸದಸ್ಯರಾದ ಪ್ರಭಾಕರ್, ವಸಂತನರಸಾಪುರ ಕೈಗಾರಿಕೋದ್ಯಮಿಗಳ ಸಂಘದ ಉಪಾಧ್ಯಕ್ಷ ಜಿ.ವಿ.ರಾಮಮೂರ್ತಿ ಇದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !