ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್‌: ₹ 2.25 ಕೋಟಿ ಜಿಎಸ್‌ಟಿ ವಸೂಲಿ

Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಾಡಿಗೆದಾರರಿಂದ ಶೇ 18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹಿಸಿ ಪಾವತಿ ಮಾಡದ ನಗರದ ‍ಪ್ರತಿಷ್ಠಿತ ಮಾಲ್‌ವೊಂದರ ಮಾಲೀಕರಿಂದ ವಾಣಿಜ್ಯ ತೆರಿಗೆ ಇಲಾಖೆ ₹ 2.25 ಕೋಟಿ ವಸೂಲು ಮಾಡಿದೆ. ಒಂದು ವಾರದಲ್ಲಿ ಉಳಿದ ₹ 4.42 ಕೋಟಿ ಪಾವತಿಸಲು ಅವರು ಒಪ್ಪಿದ್ದಾರೆ.

ಮಾಲ್‌ನೊಳಗೆ 238 ಬಾಡಿಗೆದಾರರಿಗೆ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟಿರುವ ಮಾಲೀಕರು, 2017ರ ಡಿಸೆಂಬರ್‌ನಿಂದ 2018 ಏಪ್ರಿಲ್‌ವರೆಗೆ ₹ 6.67 ಕೋಟಿ ಜಿಎಸ್‌ಟಿ ಸಂಗ್ರಹಿಸಿದ್ದರು. ಆದರೆ, ಅದನ್ನು ಇಲಾಖೆಗೆ ಪಾವತಿಸಿರಲಿಲ್ಲ. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ದಕ್ಷಿಣ ವಲಯದ ಜಾರಿ ವಿಭಾಗದ ಅಧಿಕಾರಿಗಳು ಜೂನ್‌ 4ರಂದು ನಡೆಸಿದ ಪರಿಶೀಲನೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಜಿಎಸ್‌ಟಿ ಪಾವತಿಸದ ಬಗ್ಗೆ ಒಪ್ಪಿಕೊಂಡ ಕಂಪನಿ, ಗುರುವಾರ ₹ 2.25ಕೋಟಿ ಪಾವತಿಸಿದೆ. ಈ ಪ್ರಕರಣವನ್ನು ಅಧಿಕಾರಿಗಳು ಇನ್ನೂ ಪರಿಶೀಲಿಸುತ್ತಿದ್ದು ದಂಡದ ಮೊತ್ತದ ಜೊತೆಗೆ ಅಂತಿಮವಾಗಿ ಪಾವತಿಸಬೇಕಾದ ತೆರಿಗೆ ಪ್ರಮಾಣವು ಈ ಪ್ರಕ್ರಿಯೆ ಮುಗಿದ ಬಳಿಕ ತಿಳಿಯಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಇಂತಹ ಅನೇಕ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದಿದ್ದು, ತೆರಿಗೆ ಪಾವತಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT