ಮಾನಸಿಕ ಆರೋಗ್ಯವೂ ಮುಖ್ಯ: ಡಾ.ಅನಿಲ್‌ಕುಮಾರ್

7
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಜಾಗೃತಿ ಕಾರ್ಯಕ್ರಮ

ಮಾನಸಿಕ ಆರೋಗ್ಯವೂ ಮುಖ್ಯ: ಡಾ.ಅನಿಲ್‌ಕುಮಾರ್

Published:
Updated:
Deccan Herald

ತುಮಕೂರು: ಯುವಜನರು ಇತ್ತೀಚೆಗೆ ಮಾದಕ ವಸ್ತುಗಳತ್ತ ಮಾರು ಹೋಗುತ್ತಿದ್ದು, ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮನೋವೈದ್ಯ ಡಾ.ಅನಿಲ್‌ಕುಮಾರ್ ಕಳವಳ ವ್ಯಕ್ತಪಡಿಸಿದರು.

ನಗರದ ಶಂಕರಪುರನಲ್ಲಿರುವ ಪಾವನ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ದೈಹಿಕ ಆರೋಗ್ಯದಂತೆಯೇ ಮಾನಸಿಕ ಆರೋಗ್ಯವೂ ಮುಖ್ಯವಾದುದು. ಒಂದು ವೇಳೆ ಮಾನಸಿಕ ಕಾಯಿಲೆ ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಾಗಲಿದೆ ಎಚ್ಚರಿಸಿದರು.

ಇಂದಿಗೂ ಸಹ ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿಯೂ ಕಾಯಿಲೆ ಬಂದರೆ ಯಂತ್ರ ಹಾಕಿಸಿಕೊಳ್ಳುವ, ದೇವರಿಗೆ ಹರಕೆ ಕಟ್ಟುವ ಸಂಸ್ಕೃತಿಗಳು ಮುಂದುವರೆದಿವೆ. ಆದರೆ ಮಾನಸಿಕ ಕಾಯಿಲೆಗಳಿಗೆ ದೇವಸ್ಥಾನಗಳು ಮದ್ದಲ್ಲ ಎಂಬುದನ್ನು ತಿಳಿಯಬೇಕು. ಮನಸ್ಸಿನಲ್ಲಿ ಆಗಿರುವ ಏರುಪೇರುಗಳನ್ನು ಸಮಾಲೋಚನೆಯ ಮೂಲಕವೇ ಬಗೆಹರಿಸಲು ಮಾನಸಿಕ ವೈದ್ಯ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಮಕ್ಕಳು ಹೆಚ್ಚು ಅಂಕ ಪಡೆಯಬೇಕೆಂಬ ಧಾವಂತಕ್ಕೆ ಬೀಳುವ ಪೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕುತ್ತಾರೆ. ಹೀಗಾಗಿ ಮಕ್ಕಳು ಅಂಕ ಪಡೆಯುವ ಯಂತ್ರಗಳಾಗುತ್ತಿದ್ದಾರೆ. ಇದಕ್ಕೆ ಬದಲಾಗಿ ಮಕ್ಕಳಲ್ಲಿ ಜೀವನ ಕೌಶಲ ರೂಪಿಸುವ ಪ್ರಯತ್ನ ಆಗಬೇಕು. ಆ ನಿಟ್ಟಿನಲ್ಲಿ ಪೋಷಕ ವರ್ಗ ಚಿಂತಿಸಬೇಕು ಎಂದರು.

ಪಾವನ ಆಸ್ಪತ್ರೆಯ ವೈದ್ಯ ಡಾ.ಮುರಳೀಧರ್ ಮಾತನಾಡಿ, ’ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಾದಕ ವಸ್ತುಗಳು ಹೆಚ್ಚು ದುಷ್ಪರಿಣಾಮ ಬೀರುತ್ತವೆ. ಜೊತೆಗೆ ಇಂದು ಬಹಳಷ್ಟು ಕಡೆ ರಸ್ತೆಗಳಲ್ಲಿ ಕೆಲವರು ಗಡ್ಡ ಬಿಟ್ಟುಕೊಂಡು ಹರಕಲು ಬಟ್ಟೆ ಹಾಕಿಕೊಂಡು ಓಡಾಡುತ್ತಾರೆ. ಅವರೆಲ್ಲರೂ ಹುಚ್ಚರಲ್ಲ. ಎಂಜಿನಿಯರಿಂಗ್, ಮೆಡಿಕಲ್ ಓದಿರುವ ಯುವಕರಾಗಿದ್ದು ಮಾನಸಿಕ ಸಮಸ್ಯೆಯಿಂದ ಸುತ್ತಾಡುತ್ತಿದ್ದಾರೆ. ಸಮಾಲೋಚನೆ ಮತ್ತು ಚಿಕಿತ್ಸೆ ಮೂಲಕ ಅವರನ್ನು ಸರಿದಾರಿಗೆ ತರಬಹುದು’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !