ಶನಿವಾರ, ಜನವರಿ 23, 2021
22 °C

ರಾಗಿ ಬಣವೆ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರಟಗೆರೆ: ಆಕಸ್ಮಿಕ ಬೆಂಕಿ ತಗುಲಿ ತಾಲ್ಲೂಕಿನ ಕಾಮೇನಹಳ್ಳಿಯ ತಿಮ್ಮರಾಜು ಎಂಬುವರಿಗೆ ಸೇರಿದ ಹುಲ್ಲಿನ ಬಣವೆ ಸುಟ್ಟು ಹೋಗಿದೆ.

ಕೊರಟಗೆರೆ, ಮಧುಗಿರಿ ರಸ್ತೆಯ ಕಾಮೇನಹಳ್ಳಿ ಬಳಿ ₹ 20 ಸಾವಿರ ಮೌಲ್ಯದ ರಾಗಿ ಹುಲ್ಲು ಬೆಂಕಿಗೆ ಆಹುತಿ ಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರಾದರೂ ಪ್ರಯೋಜನ ವಾಗಲಿಲ್ಲ. ಹಳೇ ವೈಷಮ್ಯದಿಂದ ಬಣವೆಗೆ ಬೆಂಕಿ ಹಚ್ಚಲಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ನಂತರ ಆಕಸ್ಮಿಕವಾಗಿ ಬೆಂಕಿ ತಗುಲಿರುವುದು ಬೆಳಕಿಗೆ ಬಂದಿದೆ. ಪಿಎಸ್ಐ ಎಚ್. ಮುತ್ತುರಾಜು ಭೇಟಿ ನೀಡಿದ್ದರು. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.