ತುಮಕೂರು: ಮತದಾರಪಟ್ಟಿ ಲೋಪ ಬಿಜೆಪಿ ಗೆಲುವಿಗೆ ಅಡ್ಡಿ– ಜ್ಯೋತಿಗಣೇಶ್ ವಿಶ್ಲೇಷಣೆ

7
ಮಹಾನಗರಪಾಲಿಕೆ ಚುನಾವಣೆ

ತುಮಕೂರು: ಮತದಾರಪಟ್ಟಿ ಲೋಪ ಬಿಜೆಪಿ ಗೆಲುವಿಗೆ ಅಡ್ಡಿ– ಜ್ಯೋತಿಗಣೇಶ್ ವಿಶ್ಲೇಷಣೆ

Published:
Updated:
Deccan Herald

ತುಮಕೂರು: ‘ಅಲ್ಪಮತದಿಂದ ಏಳೆಂಟು ವಾರ್ಡ್‌ಗಳಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಆದರೂ ಪಾಲಿಕೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮತದಾರರ ಪಟ್ಟಿಯಲ್ಲಿನ ಲೋಪದೋಷ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಯಿತು’ ಎಂದು ಶಾಸಕ ಬಿ.ಜಿ.ಜ್ಯೋತಿಗಣೇಶ್ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ 12 ಮಂದಿ ಅಭ್ಯರ್ಥಿಗಳನ್ನು ಗೆಲ್ಲಿಸಿರುವ ಮತದಾರರಿಗೆ ಕೃತಜ್ಞತೆ ಸಲ್ಲಿಸುವೆ. ಗೆಲುವು ಕಂಡಿರುವ ಎಲ್ಲ ಕಾರ್ಪೊರೇಟರ್‌ಗಳನ್ನು ಅಭಿನಂದಿಸುವೆ. ಶಾಸಕನಾಗಿ ಅಭಿವೃದ್ಧಿ ವಿಷಯದಲ್ಲಿ ಸಹಕಾರ ನೀಡುತ್ತೇನೆ’ ಎಂದು ಹೇಳಿದರು.

‘ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನುವಂತೆ ಇನ್ನೂ ಹಲವು ವಾರ್ಡ್‌ಗಳಲ್ಲಿ ಸತ್ತವರ ಹೆಸರುಗಳು ಮತಪಟ್ಟಿಯಲ್ಲಿ ಇವೆ. ಬದುಕಿರುವವರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಐದಾರು ವರ್ಷಗಳಿಂದಲೂ ಈ ಲೋಪ ಆಗಿದೆ’ ಎಂದರು.

‘ವಿಧಾನಸಭಾ ಚುನಾವಣೆ ಸಮಯದಲ್ಲಿ 2.56 ಲಕ್ಷ ಇದ್ದ ಮತದಾರರು ಈ ಚುನಾವಣೆಯಲ್ಲಿ 2.46 ಲಕ್ಷಕ್ಕೆ ಇಳಿದಿದ್ದಾರೆ. ಮತದಾರಪಟ್ಟಿಯಲ್ಲಿನ ಲೋಪ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಚುನಾವಣಾ ಆಯೋಗ ಕ್ರಮಕೈಗೊಂಡಿಲ್ಲ’ ಎಂದು ಹೇಳಿದರು.

‘ಈ ಪಟ್ಟಿಯ ಲೋಪದೋಷಕ್ಕೆ ಕಾರಣರಾದ ಚುನಾವಣಾ ಅಧಿಕಾರಿಗಳನ್ನು ಪಟ್ಟಿ ಮಾಡಲಾಗುತ್ತದೆ. ಅವರನ್ನು ಅಮಾನತುಗೊಳಿಸಬೇಕು ಎಂದು ಮೇಲಧಿಕಾರಿಗೆ ದಾಖಲೆ ಸಮೇತ ದೂರು ನೀಡುತ್ತೇವೆ. ಮುಂದಿನ ಚುನಾವಣೆಗಳು ನಡೆಯುವ ವೇಳೆಗಾದರೂ ಲೋಪ ಸರಿಪಡಿಸಬೇಕು’ ಎಂದರು. 

‘ಈ ಹಿಂದಿನ ಶಾಸಕರು ಕ್ರಿಮಿನಲ್ ಇಂಟಲಿಜೆನ್ಸ್ ಬಳಸಿ ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿಸಿದ್ದಾರೆ. ಈ ವಾರ್ಡ್ ವಿಂಗಡಣೆಯೂ ಸುವ್ಯವಸ್ಥಿತವಾಗಿ ಇಲ್ಲ. ಆ ಕಾರಣಕ್ಕೂ ಪಕ್ಷಕ್ಕೆ ಹಿನ್ನಡೆ ಆಯಿತು’ ಎಂದು ಹೇಳಿದರು.

ಪಕ್ಷದಿಂದ ಗೆಲುವು ಕಂಡಿರುವ 12 ಕಾರ್ಪೊರೇಟರ್‌ಗಳು, ಹಿಂದುಳಿದ ವರ್ಗ ವಿಭಾಗದ ಉಪಾಧ್ಯಕ್ಷ ಹುಲಿನಾಯ್ಕರ್, ಬಿ.ಡಿ.ಗೋಪಾಲಕೃಷ್ಣ ಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !