ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಸುರಾನ ಕಾಲೇಜಿಗೆ ಪ್ರಶಸ್ತಿ

Last Updated 11 ಮೇ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು: ವಿಷ್ಣು (40; 30 ಎ, 6ಬೌಂ) ಮತ್ತು ಶಶಾಂಕ್‌ ಗಣೇಶ್‌ (ಔಟಾಗದೆ 28; 20ಎ, 4ಬೌಂ) ಅವರ ಉತ್ತಮ ಬ್ಯಾಟಿಂಗ್ ಬಲದಿಂದ ಸುರಾನ ಕಾಲೇಜು ತಂಡ ಕೆ.ಎಂ.ನಂಜಪ್ಪ ಸ್ಮಾರಕ ಅಂತರ ಕಾಲೇಜು ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ.

ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್‌ನಲ್ಲಿ ಸುರಾನ ತಂಡ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ 8 ವಿಕೆಟ್‌ಗಳಿಂದ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ತಂಡವನ್ನು ಸೋಲಿಸಿತು.

ಮೊದಲು ಬ್ಯಾಟ್‌ ಮಾಡಿದ ಶೇಷಾದ್ರಿಪುರಂ ಕಾಲೇಜು 20 ಓವರ್‌ ಗಳಲ್ಲಿ 135 ರನ್‌ ಗಳಿಸಿತು.

ಗುರಿ ಬೆನ್ನಟ್ಟಿದ ಸುರಾನ ತಂಡ 11 ಓವರ್‌ಗಳಲ್ಲಿ 2 ವಿಕೆಟ್‌ಗೆ 96ರನ್‌ ಗಳಿಸಿತ್ತು. ಈ ವೇಳೆ ಧಾರಾಕಾರ ಮಳೆ ಸುರಿದ ಕಾರಣ ಆಟ ನಿಲ್ಲಿಸಲಾಯಿತು.

ಸಂಕ್ಷಿಪ್ತ ಸ್ಕೋರ್‌: ಶೇಷಾದ್ರಿಪುರಂ ಕಾಲೇಜು: 20 ಓವರ್‌ಗಳಲ್ಲಿ 135 (ಚೆಂಗಪ್ಪ 42, ಭರತ್‌ 18). ಸುರಾನ ಕಾಲೇಜು: 11 ಓವರ್‌ಗಳಲ್ಲಿ 2 ವಿಕೆಟ್‌ಗೆ 96 (ವಿಷ್ಣು 40, ಶಶಾಂಕ್‌ ಗಣೇಶ್‌ ಔಟಾಗದೆ 28).

ಫಲಿತಾಂಶ: ಸುರಾನ ಕಾಲೇಜಿಗೆ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ 8 ವಿಕೆಟ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT