ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಮೊಹರಂ; ಪಂಜಾ ಮೆರವಣಿಗೆ

Published:
Updated:
Prajavani

ತುಮಕೂರು: ಶೋಕಾಚರಣೆ ಸಂಕೇತವಾದ ಮೊಹರಂ ಹಬ್ಬವನ್ನು ನಗರದಲ್ಲಿ ಮುಸ್ಲಿಮರು ಆಚರಿಸಿದ

ಚಿಕ್ಕಪೇಟೆಯ ಬಾಬಯ್ಯನ ಗುಡಿಯ ಬಳಿ ಜಮಾಯಿಸಿದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ ಅಗ್ನಿಕೊಂಡ ಹಾಯ್ದರು.

ನಂತರ ಮೆರವಣಿಗೆ ಮೂಲಕ ‌‌‌ಹೊರಟು ಮಂಡಿಪೇಟೆ ಸರ್ಕಲ್‌ನಲ್ಲಿ ಒಂದೆಡೆ ಜಮಾವಣೆ ಆದರು. ಅಲ್ಲಿಂದ ಈದ್ಗಾ ಮೈದಾನ ಮತ್ತು ಬನಶಂಕರಿವರೆಗೆ ಮೆರವಣಿಗೆಯಲ್ಲಿ ತೆರಳಿ ಹಬ್ಬ ಆಚರಿಸಲಾಯಿತು.

ಈ ಹಬ್ಬದ ವಿಶೇಷವಾಗಿ ಬಾಬಯ್ಯನ ಗುಡಿಯಲ್ಲಿ ಸಕ್ಕರೆ ವದಿಸಿ ಮಕ್ಕಳಿಗೆ ನೀಡಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಮರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಸೀದಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪಂಜಾ ಮತ್ತು ಡೋಲಿಗಳ ಮೆರವಣಿಗೆ ಮಾಡಿ ನಡೆಯಿತು.

Post Comments (+)