ತಿಪಟೂರು: ವಿದ್ಯಾರ್ಥಿನಿ ಹಾಗೂ ತಾಯಿ ಮೇಲೆ ಗಾರ್ಮೆಂಟ್ಸ್‌ಗೆ ಸೇರಿದ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಹುಚ್ಚನಹಟ್ಟಿ ರಾಮಶೆಟ್ಟಿಹಟ್ಟಿ ಬಳಿಯ ರಾಷ್ಠಿಯ ಹೆದ್ದಾರಿಯ ಬೈಪಾಸ್ ಬಳಿ ಸೋಮವಾರ ಅಪಘಾತ ನಡೆದಿದೆ.
ರಾಮಶೆಟ್ಟಿಹಳ್ಳಿ ಗ್ರಾಮದ ಕಮಲಮ್ಮ (45) ಹಳೇಪಾಳ್ಯ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವೀಣಾ (13) ಮೃತರು.
ಗಾಯಗೊಂಡವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಾಲು ಮಾಡಲಾಗಿದೆ.
ಪ್ರತಿ ನಿತ್ಯ ಇದೇ ರೀತಿ ಅಪಘಾತಗಳು ನೆಡೆಯುತ್ತಿದ್ದನ್ನು ಖಂಡಿಸಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತ ದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.