ಶಿರಾ: ತಾಲ್ಲೂಕಿನ ರಾಮಲಿಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಪ್ಪನಹಳ್ಳಿ ಗ್ರಾಮದಲ್ಲಿ ರೈತರು ಸಾಗುವಳಿ ಮಾಡುತ್ತಿದ್ದ ಜಮೀನನ್ನು ಡೀಮ್ಡ್ ಫಾರೆಸ್ಟ್ (ಪರಿಭಾವಿತ ಅರಣ್ಯ) ಎಂದು ಸೂಚನಾ ಪತ್ರ ಪ್ರಕಟಿಸಿರುವುದು ರೈತರ ನಿದ್ದೆ ಕೆಡಿಸುತ್ತಿದ್ದು, ಆತಂಕ ಮೂಡಿಸಿದೆ.

ಸೂಚನಾ ಪತ್ರದಲ್ಲಿ ಮುದ್ದಪ್ಪನಹಳ್ಳಿ ಸರ್ವೆ ನಂಬರ್ 13ರಲ್ಲಿ 19.03 ಎಕರೆ, ಸರ್ವೆ ನಂಬರ್ 14ರಲ್ಲಿ 18.45 ಎಕರೆ, ಸರ್ವೆ ನಂಬರ್ 15ರಲ್ಲಿ 62.06ಎಕರೆ, ಸರ್ವೆ ನಂಬರ್ 16ರಲ್ಲಿ 78.05 ಎಕರೆ ಮತ್ತು ಸರ್ವೆ ನಂಬರ್ 17ರಲ್ಲಿ 99.22 ಎಕರೆ ಸೇರಿದಂತೆ ಒಟ್ಟು 277 ಎಕರೆ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಘೋಷಿಸಿ ಶಿರಾ ತಹಶೀಲ್ದಾರ್, ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ, ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ, ತುಮಕೂರು ಜಿಲ್ಲಾಧಿಕಾರಿ ಮತ್ತು ತುಮಕೂರು ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಸಹಿ ಮತ್ತು ಮೊಹರು ಹಾಕಿದ್ದಾರೆ.

ಸದ್ಯಕ್ಕೆ ಗುರ್ತಿಸಿರುವ ಪ್ರದೇಶ ಸಹ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಇದ್ದು ಸದ್ದುಗದ್ದಲವಿಲ್ಲದೆ ಅರಣ್ಯ ಇಲಾಖೆಗೆ ವರ್ಗಾಯಿಸುವ ಕೆಲಸ ನಡೆದಿದೆ. ಈ ಜಾಗವನ್ನು ಅರಣ್ಯೇತರ ಉದ್ದೇಶಗಳಿಗೆ ಬಳಕೆ ಮಾಡದೆ ಅರಣ್ಯ ಬೆಳೆಸುವ ಉದ್ದೇಶವನ್ನು ಅಧಿಕಾರಗಳು ಹೊಂದಿದ್ದು ಇದರ ಮೊದಲ ಹೆಜ್ಜೆಯಾಗಿ ಗ್ರಾಮ ಪಂಚಾಯಿತಿಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದೆ.

ಡೀಮ್ಡ್ ಫಾರೆಸ್ಟ್ ಎಂದು ಗುರ್ತಿಸಿರುವ ಜಾಗದಲ್ಲಿ ಇದುವರೆಗೂ ಅರಣ್ಯ ಇಲಾಖೆಯವರು ಹೆಜ್ಜೆಯನ್ನೇ ಇಟ್ಟಿಲ್ಲ. 50 ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. 10ರಿಂದ 15 ಎಕರೆ ಮಾತ್ರ ಬೀಳು ಬಿದ್ದಿದೆ. ಉಳಿದೆಡೆ ರೈತರು ಬೆಳೆ ಬೆಳೆಯುತ್ತಿದ್ದಾರೆ ಎನ್ನುವುದು ಸ್ಥಳೀಯ ರೈತರ ವಾದ.

ಸರ್ಕಾರವೇ ಬಗರ್ ಹುಕುಂ ಸಮಿತಿಗಳ ಮೂಲಕ ರೈತರಿಗೆ ಜಮೀನು ಮಂಜೂರು ಮಾಡಿ ಸಾಗುವಳಿ ಪತ್ರ ನೀಡಿ ಖಾತೆ ಮಾಡಿಕೊಟ್ಟಿದ್ದಾರೆ. ಕೆಲವು ರೈತರು ಈ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೆಲವರು ಶೆಡ್ ನಿರ್ಮಾಣ ಮಾಡಿಕೊಂಡು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಒಂದು ವೇಳೆ ಇದು ಡೀಮ್ಡ್ ಅರಣ್ಯ ಪ್ರದೇಶ ಎಂದು ಗುರುತಿಸಿದ್ದರೆ ತಹಶೀಲ್ದಾರ್ ಅವರು ನಿಯಮಬಾಹಿರವಾಗಿ ಸಾಗುವಳಿ ಚೀಟಿ ನೀಡಿದ್ದಾರೆಯೇ ಎನ್ನುವುದು ರೈತರ ಪ್ರಶ್ನೆ.

ಕೆಲವು ರೈತರಿಗೆ ಸಾಗುವಳಿ ಪತ್ರ ನೀಡಿದ್ದರೆ, ಇನ್ನು ಕೆಲವು ರೈತರು ಸಾಗುವಳಿ ಪತ್ರದ ನಿರೀಕ್ಷೆಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

‘ಕೆಲವು ರೈತರು ತಮ್ಮ ಜಮೀನುಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಿಕೊಂಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಜಮೀನುಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ, ತೋಟಗಾರಿಕೆ ಇಲಾಖೆ ನೀಡುವ ಸಬ್ಸಿಡಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಸವಲತ್ತು ಪಡೆದುಕೊಂಡಿದ್ದು ಈಗ ಏಕಾಏಕಿ ಇದು ಡೀಮ್ಡ್ ಫಾರೆಸ್ಟ್ ಎಂದರೆ ರೈತರ ಸ್ಥಿತಿ ಏನಾಗಬೇಕು? ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರಿಗೆ ಸರ್ಕಾರದ ನಿರ್ಧಾರ ಮರಣ ಶಾಸನವಾಗಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ದಾರಿ ಒಂದೇ ಉಳಿದಿದೆ’ ಎಂದು ರೈತರು ನೋವು ತೋಡಿಕೊಂಡರು.

ಇದು ಕೇವಲ ಒಂದು ಊರಿನ ಸಮಸ್ಯೆಯಲ್ಲ. ತಾಲ್ಲೂಕಿನ 1,989 ಎಕರೆ ಸೇರಿದಂತೆ ಜಿಲ್ಲೆಯಾದ್ಯಾಂತ 33,471 ಎಕರೆ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಸರ್ಕಾರ 2022ರಲ್ಲಿ ಘೋಷಿಸಿದ್ದು, ಈಗ ಗ್ರಾಮ ಪಂಚಾಯಿತಿಗಳ ನೋಟಿಸ್ ಬೋರ್ಡ್ಗಳಲ್ಲಿ ಪ್ರಕಟ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.