ಪುರಸಭೆ ವಾಹನ ಜಪ್ತಿ

7

ಪುರಸಭೆ ವಾಹನ ಜಪ್ತಿ

Published:
Updated:
Deccan Herald

ಪಾವಗಡ: ಕಸ ವಿಲೇವಾರಿಗಾಗಿ ಪುರಸಭೆಗೆ ಜಮೀನು ಕೊಟ್ಟಿದ್ದ ಮಾಲೀಕನಿಗೆ ಸಕಾಲದಲ್ಲಿ ಹಣ ಪಾವತಿಸದ ಕಾರಣ ಪುರಸಭೆ ವಾಹನವನ್ನು ಶುಕ್ರವಾರ ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಲಾಯಿತು.

ಕಸ ವಿಲೇವಾರಿಗಾಗಿ ಲಕ್ಷ್ಮಿನಾರಾಯಣಪ್ಪ ಎಂಬುವವರು 2007ರಲ್ಲಿ ಪುರಸಭೆಗೆ 10 ಎಕರೆ ಜಮೀನು ಕೊಟ್ಟಿದ್ದರು. ಸುಮಾರು ₹ 5.29 ಲಕ್ಷ ಬಾಕಿ ಹಣವನ್ನು ಲಕ್ಷ್ಮಿನಾರಾಯಣ ಅವರಿಗೆ ಪಾವತಿ ಮಾಡುವಂತೆ ನ್ಯಾಯಾಲಯ ಪುರಸಭೆ ಅಧಿಕಾರಿಗಳಿಗೆ ಆದೇಶಿಸಿತ್ತು. ಹಣ ಪಾವತಿಸಲು ಅಧಿಕಾರಿಗಳು 60 ದಿನಗಳ ಗಡುವು ತೆಗೆದುಕೊಂಡಿದ್ದರು. ಗಡುವು ಮುಗಿದರೂ ಹಣ ಪಾವತಿಸದ ಕಾರಣ ನ್ಯಾಯಾಲಯ ಪುರಸಭೆಯ ವಾಹನಗಳನ್ನು ಜಪ್ತಿ ಮಾಡುವಂತೆ ಆದೇಶಿಸಿತ್ತು. ಅದರಂತೆ ಕಸ ಸ್ಥಳಾಂತರಿಸುವ ಒಂದು ವಾಹನವನ್ನು ಜಪ್ತಿ ಮಾಡಲಾಯಿತು.

‘ನ್ಯಾಯಾಲಯ ಜಪ್ತಿ ಮಾಡಲು ಸೂಚಿಸಿದ 3 ವಾಹನಗಳಲ್ಲಿ ಕೇವಲ 1 ವಾಹನ ಸಿಕ್ಕಿದೆ. ಉಳಿದ 2 ವಾಹನಗಳನ್ನು ಪುರಸಭೆ ಅಧಿಕಾರಿಗಳು ಬಚ್ಚಿಟ್ಟಿದ್ದಾರೆ. ಅಧಿಕಾರಿಗಳು ನ್ಯಾಯಾಲಯದ ಆದೇಶಕ್ಕೂ ಬೆಲೆ ಕೊಡುತ್ತಿಲ್ಲ’ ಎಂದು ಲಕ್ಷ್ಮಿನಾರಾಯಣಪ್ಪ ಆರೋಪಿಸಿದರು.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !