ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು: ನೋಂದಣಿ ಪ್ರಾರಂಭವಾಗಿ ವಾರ ಕಳೆದರೂ ನಾಫೆಡ್‌ನತ್ತ ಬರುತ್ತಿಲ್ಲ

Last Updated 25 ಜೂನ್ 2020, 8:12 IST
ಅಕ್ಷರ ಗಾತ್ರ

ತಿಪಟೂರು: ಕೊಬ್ಬರಿ ಬೆಲೆಯಲ್ಲಿ ಬಾರಿ ಕುಸಿತ ಕಂಡ 4 ತಿಂಗಳ ನಂತರ ಕೇಂದ್ರ ಸರ್ಕಾರ ನಾಫೆಡ್ ಮೂಲಕ ಬೆಂಬಲ ಬೆಲೆಯಲ್ಲಿ ಕೊಬ್ಬರಿಖರೀದಿಸಲು ಮುಂದಾಗಿದೆ. ನೋಂದಣಿ ಪ್ರಾರಂಭವಾಗಿ ವಾರ ಕಳೆದರೂ ರೈತರು ಆಸಕ್ತಿ ತೋರುತ್ತಿಲ್ಲ.

2020- 21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಗುಣಮಟ್ಟದ ಕೊಬ್ಬರಿಯನ್ನು ನೇರವಾಗಿ ನಾಫೆಡ್ ಸಂಸ್ಥೆ ಮೂಲಕ ಖರೀದಿಗೆ ಜೂನ್ 18ರಿಂದ ನೋಂದಣಿ ಪ್ರಾರಂಭವಾಗಿದೆ. ಆದರೆ ಇದುವರೆಗೆ ಕೇವಲ 11 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಕ್ವಿಂಟಲ್‌ಗೆ ₹10,300ಕ್ಕೆ ಖರೀದಿಸಲು ಮುಂದಾಗಿದೆ. ರಾಜ್ಯ ಸರ್ಕಾರದಿಂದ ಯಾವುದೇ ಪ್ರೋತ್ಸಾಹಧನ ದೊರೆತಿಲ್ಲ. ಕ್ವಿಂಟಲ್ ಕೊಬ್ಬರಿಗೆ ₹20 ಸಾವಿರ ಉತ್ಪಾದನಾ ವೆಚ್ಚ ತಗುಲುತ್ತದೆ. ನಷ್ಟ ಮಾಡಿಕೊಂಡು ಮಾರಾಟ ಮಾಡಲು ರೈತರು ಮುಂದಾಗುತ್ತಿಲ್ಲ.

2016ರಿಂದ ಇಲ್ಲಿಯವರೆಗೆ ಬೆಲೆ ಇಳಿಕೆಯಾಗದ ಕಾರಣ ನಾಫೆಡ್ ಪ್ರಾರಂಭಿಸಿರಲಿಲ್ಲ. ಆದರೆ ಕಳೆದ 4 ತಿಂಗಳಿಂದ ಕನಿಷ್ಠ ಬೆಲೆಗೆ ಕುಸಿದಿತ್ತು. ಕಳೆದ ವರ್ಷ ಇದೇ ಸಮಯದಲ್ಲಿ ₹15 ಸಾವಿರದಿಂದ ₹ 17 ಸಾವಿರ ಇತ್ತು.

ರೈತರು ನಾಫೆಡ್‌ನಲ್ಲಿ ನೋಂದಣಿ ಮಾಡಿಸಲು ಆಧಾರ್ ಸಂಖ್ಯೆ ನೀಡಿ, ಐ.ಡಿ. ನಂಬರ್ ಪಡೆದುಕೊಳ್ಳಬೇಕು. ಪ್ರತಿ ರೈತನಿಗೆ ಒಂದು ಎಕರೆ ಜಮೀನಿಗೆ ಗರಿಷ್ಠ 20 ಕ್ವಿಂಟಲ್ ಖರೀದಿಸಲಾಗುತ್ತದೆ. ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT