‘ನಮ್ಮೂರ್‌ ಕುಣಿಗಲ್’ ಆಡಿಯೊ ಬಿಡುಗಡೆ

7
ಹಾಡಿಗೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು

‘ನಮ್ಮೂರ್‌ ಕುಣಿಗಲ್’ ಆಡಿಯೊ ಬಿಡುಗಡೆ

Published:
Updated:
Prajavani

ಕುಣಿಗಲ್: ತಾಲ್ಲೂಕಿನ ತೆಪ್ಪಸಂದ್ರ ಯುವಕರು ನಿರ್ಮಿಸಿರುವ ನಮ್ಮೂರ್‌ ಕುಣಿಗಲ್ ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮ ತಾಲ್ಲೂಕಿನ 15 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ನಡೆಯಿತು.

ಬಳಿಕ ಸಂಜೆ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರದ ಗಾಯಕರು ಹಾಡಿದಾಗ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಪ್ರೋತ್ಸಾಹ ನೀಡಿದರು.

ಶಾಸಕ ಡಾ.ರಂಗನಾಥ್ ಮಾತನಾಡಿ, ಗ್ರಾಮೀಣ ಪ್ರದೇಶದ ರೈತರ ಬವಣೆ ಮತ್ತು ಅಗತ್ಯತೆಗಳನ್ನು ಬಿಂಬಿಸುವ ಚಿತ್ರವನ್ನು ತಾಲ್ಲೂಕಿನ ಯುವಕರು ನಿರ್ಮಿಸಿದ್ದಾರೆ. ಪ್ರೋತ್ಸಾಹ ನೀಡಬೇಕಾದ್ದು ತಾಲ್ಲೂಕಿನ ಜನರ ಕರ್ತವ್ಯವಾಗಬೇಕಿದೆ. ಮೊದಲ ದಿನದ ಎಲ್ಲ ಶೋಗಳಿಗೂ ಟಿಕೆಟ್ ಖರೀದಿಸುವುದಾಗಿ ತಿಳಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ರೈತಪರವಾದ ಚಿತ್ರವನ್ನು ರೈತರ ಮಕ್ಕಳು ನಿರ್ಮಿಸಿದ್ದಾರೆ. ರಾಜ್ಯ ಸಂಘದ ಅಧ್ಯಕ್ಷರೊಂದಿಗೆ ಚರ್ಚಿಸಿ ರಾಜ್ಯಮಟ್ಟದಲ್ಲಿ ಬಿಡುಗಡೆಗೆ ಶ್ರಮಿಸುವುದಾಗಿ ತಿಳಿಸಿದರು.

ಬಣ್ಣದಲೋಕ ವೇದಿಕೆಯ ದಿನೇಶ್ ಕುಮಾರ್, ನಾರಾಯಣಗುರು ಸಮಿತಿಯ ರವೀಂದ್ ಕುಮಾರ್, ಅಂಬರೀಷ್ ಅಭಿಮಾನಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ನಾಗಣ್ಣ, ಶಿವರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಶಿವಣ್ಣ, ಚಿತ್ರದ ನಿರ್ದೇಶಕ ಗಗನ್ ರೇವಣ್ಣ, ನಾಯಕ ನಟ ಪ್ರಸನ್ನ, ನಟಿ ರಶ್ಮಿ, ಸಂಗೀತ ನಿರ್ದೇಶಕ ಜಿನ್ನು ಅಗಸ್ಟಿನ್, ರೈತ ಸಂಘದ ತಾಲ್ಲೂಕು ಘಟಕದ ಅನಿಲ್ ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !