ಬಾಗೂರು (ನುಗ್ಗೇಹಳ್ಳಿ): ಯೂರಿಯಾ ಹಾಗೂ ರಸಗೊಬ್ಬರದ ಬೆಲೆಯ ಹೆಚ್ಚಳ ಹಾಗೂ ದಾಸ್ತಾನು ಕೊರತೆ ನೀಗಿಸುವ ಸಲುವಾಗಿ ರೈತರು ಕೃಷಿ ಚಟುವಟಿಕೆಗೆ ನ್ಯಾನೊ ಯೂರಿಯಾ ಬಳಸುವಂತೆ ಹೋಬಳಿ ಕೃಷಿ ಅಧಿಕಾರಿ ಎಚ್.ಎಸ್ ರಕ್ಷಿತ್ ತಿಳಿಸಿದರು.

ಹೋಬಳಿಯ ಭಕ್ತರಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಹಾರ ಮತ್ತು ಪೌಷ್ಟಿಕ ಭದ್ರತೆಯ ಎಫ್ಎನ್ಎಸ್ ಯೋಜನೆ ಯಡಿ ಅಲಸಂದೆ ರಾಗಿ ಗೊಬ್ಬರ ಇತರೆ ಪರಿಕರಗಳ ವಿತರಣೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಯೂರಿಯಾ ಹಾಗೂ ರಸಗೊಬ್ಬರದ ಕೊರತೆಯನ್ನು ತಪ್ಪಿಸಲು ರೈತರು ಸಾವಯವ ಕೃಷಿ ಹಾಗೂ ನ್ಯಾನೊ ಯೂರಿಯಾ ಬಳಕೆ ಮಾಡುವ ಮೂಲಕ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಚಟುವಟಿಕೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಕ್ಷೇತ್ರದ ಶಾಸಕರಾದ ಸಿ.ಎನ್ ಬಾಲಕೃಷ್ಣ ಹಾಗೂ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕರಾದ ಮೋಹನ್ ಅವರ ಸಲಹೆಯಂತೆ ಭಕ್ತರಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು 100 ಹೆಕ್ಟೇರ್ ಪ್ರದೇಶದ ಬಿತ್ತನೆಗಾಗಿ ಪ್ರಸ್ತುತ ಸಾಲಿನಲ್ಲಿ ಗ್ರಾಮದ 100 ರೈತರಿಗೆ ₹2500 ಬೆಲೆಯ ಬೀಜ– ಗೊಬ್ಬರ ಉಚಿತವಾಗಿ ನೀಡಲಾಗುತ್ತಿದ್ದು, ಜೊತೆಗೆ ಸಹಾಯಧನದ ಹಣವನ್ನು ರೈತರ ಖಾತೆಗೆ ನೇರವಾಗಿ ಹಾಕಲಾಗುತ್ತದೆ ಎಂದರು.

ಸದ್ಯಪೂರ್ವ ಮುಂಗಾರಿಗೆ ರೈತರಿಗೆ ಬಿತ್ತನೆಗೆ ಹೆಸರು ಕಾಳು ಅಲಸಂದೆ ಜೋಳ ಸೇರಿದಂತೆ ಇತರೆ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ. ರೈತರು ತಪ್ಪದೆ ಕೃಷಿ ಇಲಾಖೆಗೆ ಭೇಟಿ ನೀಡಿ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಂಜುಂಡಪ್ಪ, ಕೃಷಿ ಪತ್ತಿನ ನಿರ್ದೇಶಕ ಬಿಎನ್ ಮಾಲಿಂಗಪ್ಪ, ಕೃಷಿ ಇಲಾಖೆಯ ಸಿಬ್ಬಂದಿ ಬಸವರಾಜು, ವೀಣಾ, ಕೃಷಿ ಸುಖಿಯರು ಮತ್ತು ರೈತರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-36-2112278751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.