ನಾರದ ತ್ರಿಲೋಕ ಸಂಚಾರಿ

7
ಜ್ಞಾನಬುತ್ತಿ ಸತ್ಸಂಗ ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಹೇಳಿಕೆ

ನಾರದ ತ್ರಿಲೋಕ ಸಂಚಾರಿ

Published:
Updated:
Deccan Herald

ತುಮಕೂರು: ನಮ್ಮ ದೇಶದ ಮಹಾಕಾವ್ಯಗಳು ಎಂದರೆ ಅದು ರಾಮಾಯಣ ಮತ್ತು ಮಹಾಭಾರತ. ಇವುಗಳಲ್ಲಿ ಬರುವ ಪಾರಗಳೆಲ್ಲವೂ ಸಹ ಗಂಭೀರವಾದ ಪಾತ್ರಗಳಾಗಿವೆ ಎಂದು ನಿವೃತ್ತ ಅಧ್ಯಾಪಕ ಸುಬ್ರಮಣ್ಯ ತಿಳಿಸಿದರು.

ಕೃಷ್ಣಾನಗರದ ವಿದ್ಯಾವಾಹಿನಿ ಕಾಲೇಜಿನಲ್ಲಿ  ಜ್ಞಾನಬುತ್ತಿ ಸತ್ಸಂಗ ಕೇಂದ್ರವು ಆಯೋಜಿಸಿದ್ದ ಸಾಪ್ತಾಹಿಕ ಸತ್ಸಂಗ ಕಾರ್ಯಕ್ರಮದಲ್ಲಿ ’ರಾಮಾಯಣ ಮತ್ತು ಮಹಾಭಾರತದಲ್ಲಿ ವಿಶೇಷ ಪಾತ್ರಗಳು’ ವಿಷಯ ಕುರಿತು ಅವರು ಮಾತನಾಡಿದರು.

ನಾರದರ ಪಾತ್ರ ಈ ಕಾವ್ಯಗಳಲ್ಲಿ ಎರಡರಲ್ಲೂ ಬರುತ್ತದೆ. ಹರಿಯ ಗುಣಗಾನಗಳನ್ನು ಮಾಡುತ್ತ ನಾರದ ತ್ರಿಲೋಕ ಸಂಚಾರಿಯಾದ. ಹರಿಯ ಜಪವನ್ನು ಮಾಡುವವರಿಗೆ ಮುಕ್ತಿಯನ್ನು ಕೊಡಿಸುವುದು ನನ್ನ ಜವಾಬ್ದಾರಿ ಎಂದು ನಾರದ ಹೇಳಿದ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಂ.ಆರ್.ಮಲ್ಲಪ್ಪ ಮಾತನಾಡಿ, ಪುರಾಣ ಕಾವ್ಯಗಳಲ್ಲಿ ಬರುವ ಪಾತ್ರಗಳು ಅದರದ್ದೇ ಆದ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ. ಈ ಪಾತ್ರಗಳಲ್ಲಿ ಕೆಲವು ಧರ್ಮದ ಪರವಾಗಿದ್ದ ಇನ್ನೂ ಕೆಲವು ಪಾತ್ರಗಳು ಅಧರ್ಮದ ಪರವಾಗಿರುತ್ತವೆ ಎಂದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !