ಮಂಗಳವಾರ, ಸೆಪ್ಟೆಂಬರ್ 28, 2021
23 °C
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದ ಡಿ.ಕೆ.ಸುರೇಶ್

ನರೇಗಾ: ನಿರೀಕ್ಷಿತ ಪ್ರಗತಿಯಲ್ಲಿ ವೈಫಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿರುವ ನರೇಗಾ ಯೋಜನೆ ಅನುಷ್ಠಾನಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ನರೇಗಾ ಅನುಷ್ಠಾನ
ದಲ್ಲಿ ನಿರೀಕ್ಷಿತ ಗುರಿ ಮುಟ್ಟುವಲ್ಲಿನ ವೈಫಲ್ಯಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಆಗಸ್ಟ್ 15ರೊಳಗೆ ಅರ್ಹರಿಗೆ ಜಾಬ್ ಕಾರ್ಡ್ ವಿತರಿಸಿ, ವೈಯುಕ್ತಿಕ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ತಾಲ್ಲೂಕಿನಲ್ಲಿ 38 ಸಾವಿರ ಜಾಬ್
ಕಾರ್ಡ್ ಮಾಡಿದ್ದರೂ, ಕೇವಲ 180 ಮಂದಿಗೆ ಮಾತ್ರ 100 ಮಾನವ ದಿನ
ಗಳ ಬಳಕೆಯಾಗಿದೆ. ಇನ್ನೂ 12 ಸಾವಿರ ಜಾಬ್ ಕಾರ್ಡ್ ವಿತರಣೆಗೆ ಅವಕಾಶ
ವಿದ್ದರೂ ಅಧಿಕಾರಿಗಳು ನಿರ್ಲಕ್ಷವಹಿಸಿ
ದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ 7 ಸಾವಿರ ಕುಟುಂಬಗಳಿದ್ದು, 5 ಸಾವಿರ ಕುಟುಂಬಗಳಿಗೆ ಜಾಬ್ ಕಾರ್ಡ್ ನೀಡಬೇಕಿದೆ. ಅಧಿಕಾರಿಗಳು ನರೇಗಾ ಅನುಷ್ಠಾನಕ್ಕೆ ಸಹಕರಿಸಿ, ಇಲ್ಲವೇ ಬೇರೆಡೆ ವರ್ಗಾವಣೆಯಾಗಿ ಹೋಗಿ ಎಂದು ಎಚ್ಚರಿಸಿದರು.

ಅಧಿಕಾರಿಗಳು ನರೇಗಾ ಉದ್ದೇಶ ಮತ್ತು ಮಾರ್ಗಸೂಚಿ ಪಾಲನೆ ಮಾಡದ ಕಾರಣ ಗ್ರಾಮೀಣ ಪ್ರದೇಶದ ರೈತರು ಯೋಜನೆಯ ಫಲ ಪಡೆಯಲು ಸಾಧ್ಯವಾಗಿಲ್ಲ. ಬಹುತೇಕ ಅಧಿಕಾರಿಗಳು ಸಮುದಾಯ ಆಧಾರಿತ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇನ್ನು ಮುಂದೆ ಸಮುದಾಯ ಆಧಾ
ರಿತ ಕಾಮಗಾರಿ ಮಾಡಲು ಅವಕಾಶ ನೀಡ
ದಂತೆ ಅಧಿಕಾರಿಗಳಿಗೆ ಸೂಚಿಸಿದರು.

ರೈತರ ಮನೆ ಬಾಗಿಲಿಗೆ ತೆರಳಿ ಜಾಬ್ ಕಾರ್ಡ್ ನೀಡಿ. ವೈಯುಕ್ತಿಕ ಕಾಮಗಾರಿ ಮಾಡಿದ ಫಲಾನುಭವಿಗಳಿಗೆ ಸಂಪೂರ್ಣ
ಹಣ ಅವರ ಖಾತೆಗೆ ವರ್ಗಾವಣೆ ಮಾಡಿ. ಸಾಮಾಗ್ರಿ ವೆಚ್ಚ ವೆಂಡರ್‌ಗಳಿಗೆ ನೀಡುತ್ತಿರುವ ಪಿಡಿಒಗಳನ್ನು ಅಮಾನತ್ತಿ
ನಲ್ಲಿಡಲು ಸಭೆಯಲ್ಲಿದ್ದ ಜಿಲ್ಲಾ ಪಂಚಾ
ಯಿತಿ ಮುಖ್ಯಕಾರ್ಯನಿರ್ವಹಣ ಅಧಿ
ಕಾರಿ ಡಾ.ವಿದ್ಯಾಕುಮಾರಿ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿದ್ಯಾಕುಮಾರಿ ಮಾತನಾಡಿ, ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ತಾಲ್ಲೂಕಿನಲ್ಲಿ ದೂರುಗಳು ಹೆಚ್ಚಾಗುತ್ತಿವೆ. ಅನಧಿಕೃತ ಜಾಬ್‌ ಕಾರ್ಡ್‌ಗಳು ಹೆಚ್ಚಾಗಿರುವ ಮಾಹಿತಿ ಲಭ್ಯವಾಗಿವೆ. ನಿಯಮಾವಳಿಯಂತೆ ಕಾರ್ಯನಿರ್ವಹಿಸದ 5 ಪಿಡಿಒಗಳನ್ನು ಅಮಾನತ್ತಿನಲ್ಲಿರಿಸಿ ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಶಾಸಕ ಡಾ.ರಂಗನಾಥ್, ತಹಶೀಲ್ದಾರ್ ಮಹಾಬಲೇಶ್ವರ್, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಅತೀಕ್ ಪಾಷಾ, 36 ಗ್ರಾಮ ಪಂಚಾಯಿತಿ ಪಿಡಿಒ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು