ಶುಕ್ರವಾರ, ಆಗಸ್ಟ್ 12, 2022
24 °C

ಸತ್ತವರ ಹೆಸರಿಗೆ ನರೇಗಾ ಕೂಲಿ ಹಣ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ: ಚಿಕ್ಕಮಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪಾಪುರದಲ್ಲಿ ನರೇಗಾ ಕಾಮಗಾರಿ ನಡಸದೆ ಹಣ ಮಂಜೂರು ಮಾಡಲಾಗಿದೆ. ಅಲ್ಲದೆ, ಸತ್ತವರ ಹೆಸರಿನ ಬ್ಯಾಂಕ್ ಖಾತೆಗೆ ಕೂಲಿ ಹಣ ಹಾಕಿದ್ದಾರೆ ಎಂದು ರೈತ ರಾಮಚಂದ್ರರೆಡ್ಡಿ ದೂರಿದ್ದಾರೆ. 

‘ಕೆಂಪಾಪುರದಲ್ಲಿ ಕೃಷಿ ಇಲಾಖೆಯಿಂದ ಕೃಷಿ ಹೊಂಡ ಮಾಡಿಸಲು ಅನುಮೋದನೆ ಪಡೆದ ವೆಂಕಟರೆಡ್ಡಿ ಮತ್ತು ಅವರ ಮಗ 2018ರಲ್ಲೇ ಮೃತಪಟ್ಟಿರುವ ಕೊಂಡರೆಡ್ಡಿಯವರ ಖಾತೆಗೆ ₹3,575 ಎನ್‌ಎಂಆರ್‌ ತೆಗೆಸಿದ್ದಾರೆ. ಚಿಕ್ಕಮಾಲೂರು ನಿವಾಸಿ ರಾಮಚಂದ್ರರೆಡ್ಡಿ ಮತ್ತು ಆತನ ಪತ್ನಿ ರತ್ನಮ್ಮ ಕೂಲಿ ಕೆಲಸಕ್ಕೆ ಹೋಗದಿದ್ದರೂ ಅವರ ಉದ್ಯೋಗ ಕಾರ್ಡ್‌ಗೆ ₹4,400 ಎನ್‌ಎಂ‌ಆರ್‌ ತೆಗೆಸಿದ್ದಾರೆ. ಜೊತೆಗೆ ಸಹಿ ನಕಲು ಮಾಡಿ ಈಗ ಹಣ ಡ್ರಾ ಮಾಡಿಕೊಡುವಂತೆ ಪೀಡಿಸುತ್ತಿದ್ದಾರೆ. ಈ ಬಗ್ಗೆ ತನಿಖೆಗೆ ಆಗ್ರಹಿಸಿ ಕೃಷಿ ಇಲಾಖೆ ಮಧುಗಿರಿ ಮತ್ತು ತುಮಕೂರು ಜಿಲ್ಲಾ ಪಂಚಾಯಿತಿ ಒಂಬುಡ್ಸ್‌ಮನ್‌ಗೆ ಪತ್ರ ಬರೆಯಲಾಗಿದೆ’ ಎಂದು ರಾಮಚಂದ್ರರೆಡ್ಡಿ ದೂರಿದ್ದಾರೆ.

‘ನಮ್ಮ ಇಲಾಖೆಗೆ ತಪ್ಪು ಮಾಹಿತಿ ನೀಡಿ ಎನ್‌ಎಂಆರ್‌ ತೆಗೆಸಿರುವ ವಿಚಾರ ಇದೀಗ ಗಮನಕ್ಕೆ ಬಂದಿದೆ. ಸದರಿ ಕಾಮಗಾರಿ ಬಗ್ಗೆ ಪರಿಶೀಲಿಸಿ ಸತ್ತವರ ಖಾತೆಗೆ ಜಮೆಯಾದ ಹಣವನ್ನು ಹಿಂಪಡೆಯಲಾಗುವುದು’ ಎಂದು ಕೊಡಿಗೇನಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಸಹಾಯಕ (ಪ್ರಭಾರ) ಮದನ್ ತಿಳಿಸಿದ್ದಾರೆ.

‘ಮರಣ ಹೊಂದಿರುವವರ ಹೆಸರನ್ನು ಜಾಬ್‌ಕಾರ್ಡ್‌ನಿಂದ ತೆಗೆಯಲು ನಮಗೆ ಬರುವುದಿಲ್ಲ. ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು’ ಎಂದು ಚಿಕ್ಕಮಾಲೂರು ಪಿಡಿಒ ಧನಂಜಯ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.