ಹೊಸತನದ ಹಾದಿ ಹಿಡಿಯಿರಿ

7
ಸಿದ್ಧಾರ್ಥ ತಾಂತ್ರಿಕ ಕಾಲೇಜು: ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಡಾ.ಜಿ.ಪರಮೇಶ್ವರ ಹೇಳಿಕೆ

ಹೊಸತನದ ಹಾದಿ ಹಿಡಿಯಿರಿ

Published:
Updated:

ತುಮಕೂರು: ‌ಆಧುನಿಕ ಕಾಲದಲ್ಲಿ ಅವಕಾಶಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಧೃಡಸಂಕಲ್ಪದಿಂದ ಹೆಚ್ಚು ಶ್ರಮವಹಿಸಿ ಹೊಸತನದ ಹಾದಿಯನ್ನು ಹಿಡಿಯಬೇಕಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.

ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 40 ನೇ ಬ್ಯಾಚ್‌ನ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಶಿಕ್ಷಣ, ಕೈಗಾರಿಕೆ, ಆರೋಗ್ಯ ಕ್ಷೇತ್ರಗಳು ವೇಗ ಪಡೆದುಕೊಂಡಿದ್ದು ವಿದ್ಯಾರ್ಥಿಗಳು ಅದಕ್ಕೆ ಹೊಂದಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ರೂಢಿಸಿಕೊಂಡು ಅವಕಾಶಗಳನ್ನು ಪಡೆದುಕೊಳ್ಳಲು ಪೂರ್ವ ತಯಾರಿ ಹೊಂದಿರಬೇಕು ಎಂದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್ ರಾಜಶೇಖರಯ್ಯ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ಭವಿಷ್ಯಕ್ಕಾಗಿ ಉತ್ತಮ ಕನಸು ಹೊಂದಿರಬೇಕು. ಆದರೆ ಅದನ್ನು ನನಸು ಮಾಡುವಲ್ಲಿ ಶ್ರಮವಹಿಸಬೇಕಾಗಿದೆ. ಅಬ್ದುಲ್ ಕಲಾಂ, ಮಾರ್ಟಿನ್ ಲೂಥರ್ ಅಂತಹ ಮಹಾನ್ ವ್ಯಕ್ತಿಗಳು ಸಹ ಕನಸು ಕಂಡು ಗುರಿಯನ್ನು ಸಾಧಿಸಿದವರೇ ಎಂದು ಹೇಳಿದರು.

ಪೋಷಕರು ಮಕ್ಕಳ ಭವಿಷ್ಯದ ಮೇಲೆ ಹೆಚ್ಚು ನಿಗಾ ವಹಿಸಿ, ಅವರ ನಡವಳಿಕೆ ಕುರಿತು ಅರಿವು ಹೊಂದಿದ್ದು ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ. ಇದರಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಇಸ್ರೋ ಮುಖ್ಯಸ್ಥ ಹಾಗೂ ವಿಜ್ಞಾನಿ ಬಿ.ಕೆ. ವೆಂಕಟರಾಮು ಮಾತನಾಡಿ, ವಿದ್ಯಾರ್ಥಿ ತಮ್ಮ ಪೋಷಕರ ಆಸೆ ಆಕ್ಷಾಂಕ್ಷೆಗಳನ್ನು ಈಡೇಸುವ ಜವಾಬ್ದಾರಿಯನ್ನು ಹೊಂದಿರಬೇಕು. ಹಾಗಾಗಿ ಭವಿಷ್ಯದ ಗುರಿಯನ್ನು ಸಾಧಿಸುವ ಸ್ಪಷ್ಟ ಕನಸಿರಲಿ ಆದರೆ ಅದು ಬರೀ ಕನಸಾಗಿ ಉಳಿಯದೆ ನನಸಾದಾಗ ಮಾತ್ರ ಅದಕ್ಕೊಂದು ಬೆಲೆ ಸಿಗುತ್ತದೆ ಎಂದರು.

ಟಾಟಾ ಕಂಪನಿಯ ಎಸ್.ವಿ.ಎಸ್ ಪ್ರಸಾದ್ ಮಾತನಾಡಿ, ಇಂದಿನ ಕೈಗಾರಿಕರಣದ ವೇಗಕ್ಕೆ ವಿದ್ಯಾರ್ಥಿಗಳು ಒಂದಿಕೊಳ್ಳಬೇಕು. ಹಾಗೇ ಉತ್ತಮ ಅಧ್ಯಯನಶೀಲರಾಗಿ, ಶ್ರದ್ಧೆ, ಶಿಸ್ತು , ತಾಳ್ಮೆಯನ್ನು ಹೊಂದಿ ಕಾರ್ಯಪ್ರವೃತ್ತರಾಗಬೇಕು ಎಂದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !