ಗುರುವಾರ , ಡಿಸೆಂಬರ್ 1, 2022
20 °C

ಸುಟ್ಟು ಕರಕಲಾದ ಮಾರುತಿ ಓಮ್ನಿ: ಒಬ್ಬ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಸಾತೇನಹಳ್ಳಿ ಬಳಿ ಮಂಗವಾರ ಬೆಳಗಿನ ಜಾವ‌ ಓಮ್ನಿ ವ್ಯಾನ್ ಬೆಂಕಿಗೆ ಅಹುತಿಯಾಗಿದ್ದು, ಹೊಸಕೆರೆ ಗ್ರಾಮದ ರಂಗಯ್ಯ (45) ಮೃತಪಟ್ಟಿದ್ದಾರೆ.

ಕಾರ್ ನಲ್ಲಿ ಐದು ಜನ ಪ್ರಯಾಣಿಸುತ್ತಿದ್ದರು. ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂರವರು ಅಪಾಯದಿಂದ ಪಾರಾಗಿದ್ದಾರೆ. 
ಚೇಳೂರಿನಿಂದ‌ ತುಮಕೂರಿಗೆ ಹೋಗುವ ಮಾರ್ಗ ಮಧ್ಯೆ ವಾಹನ ಅಡ್ಡ ಬಂದಿದ್ದು,‌ ರಸ್ತೆಯ ಬದಿಗೆ ನಿಲ್ಲಿಸುವಾಗ ಕಾರು ಪಲ್ಟಿಯಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಕುರಿ ಮರಿಗಳನ್ನು ತರಲು ತುಮಕೂರಿನ ಬಟವಾಡಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು