ಗುರುವಾರ , ಜೂಲೈ 9, 2020
24 °C
ಹೋಟೆಲ್ ಸಿಬ್ಬಂದಿಯಿಂದ ಸೋಂಕು ನಿವಾರಕ ಸಿಂಪಡಣೆ, ಸ್ವಚ್ಛತಾ ಕಾರ್ಯ

ಬಾಗಿಲು ತೆರೆದ ದೇಗುಲಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಹೋಟೆಲ್, ದೇವಸ್ಥಾನ, ಚರ್ಚ್, ಮಸೀದಿಗಳನ್ನು ಸೋಮವಾರದಿಂದ ತೆರೆಯಲು ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ನಗರದ ಹಲವು ಕಡೆಗಳಲ್ಲಿ ಹೋಟೆಲ್, ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಸಿದ್ಧತಾ ಕಾರ್ಯ ಭಾನುವಾರ ಭರದಿಂದ ನಡೆಯಿತು.

ಕಳೆದ ಎರಡು ತಿಂಗಳಿನಿಂದ ಮುಚ್ಚಿದ್ದ ನಗರದ ಹೋಟೆಲ್‌ಗಳು, ರೆಸ್ಟೋರೆಂಟ್‌, ಲಾಡ್ಜ್‌ಗಳನ್ನು ಸಿಬ್ಬಂದಿ ಶುಚಿಗೊಳಿಸಿದರು. ಹೋಟೆಲ್‍ಗಳ ಒಳ ಆವರಣ ಹಾಗೂ ಹೊರಭಾಗಕ್ಕೆ ಸೋಂಕು ನಿವಾರಕ ಸಿಂಪಡಿಸಿದರು.

ಟೇಬಲ್‍ವೊಂದರಲ್ಲಿ ಇಬ್ಬರಿಗೆ ಮಾತ್ರ ಕೂರಲು ಹಾಗೂ ಅಂತರ ಕಾಯ್ದುಕೊಳ್ಳಲು ಅನುಕೂಲವಾಗವಂತೆ ಅಳವಡಿಸಲಾಯಿತು. ಟೇಬಲ್, ಖುರ್ಚಿಗಳನ್ನು ಸ್ವಚ್ಛಗೊಳಿಸಿದರು.

ದೇವಸ್ಥಾನದ ಆವರಣಗಳಲ್ಲಿಯೂ ಸೋಂಕು ನಿವಾರಕ ಸಿಂಪಡಿಸಲಾಯಿತು. ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಸೇವೆಗಳು ಇರುವುದಿಲ್ಲ.

ವೃದ್ಧರು, ಗರ್ಭಿಣಿಯರಿಗೆ ಪ್ರವೇಶವಿಲ್ಲ: ದೇವಸ್ಥಾನಗಳಲ್ಲಿ ಮುಖಗವಸು ಧರಿಸದೆ ಬರುವವರು, ಮಕ್ಕಳು, ವೃದ್ಧರು, ಗರ್ಭಿಣಿಯರಿಗೆ ಅವಕಾಶ ಇರುವುದಿಲ್ಲ. ಅಂತರ ಕಾಯ್ದುಕೊಂಡು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಹ್ಯಾಂಡ್ ಸ್ಯಾನಿಟೈಸರ್‌ ನೀಡಲಾಗುವುದು ಎಂದು ದೇವಸ್ಥಾನ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

ಸರ್ಕಾರದ ಸೂಚನೆ ಮೇರೆಗೆ ತೀರ್ಥ, ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಭಕ್ತರು ಹಣ್ಣು, ತೆಂಗಿನಕಾಯಿ ಅಥವಾ ಹೂ ತರಬಾರದು ಎಂದು ಅರ್ಚಕ ಶ್ರೀನಿವಾಸ್ ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು