ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಈರುಳ್ಳಿ ದುಬಾರಿ; ಹಣ್ಣು ದರ ಏರಿಕೆ

ತರಕಾರಿ ಅಲ್ಪ ಇಳಿಕೆ; ಚೇತರಿಸಿದ ಸೊಪ್ಪಿನ ದರ; ಏರಿಕೆಯತ್ತ ಕೋಳಿ ಮಾಂಸ
Published : 18 ಆಗಸ್ಟ್ 2024, 6:03 IST
Last Updated : 18 ಆಗಸ್ಟ್ 2024, 6:03 IST
ಫಾಲೋ ಮಾಡಿ
Comments

ತುಮಕೂರು: ಬೀನ್ಸ್ ಸೇರಿದಂತೆ ತರಕಾರಿ ದರ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಈರುಳ್ಳಿ ಮತ್ತಷ್ಟು ದುಬಾರಿಯಾಗಿದೆ. ಸೊಪ್ಪಿನ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಚೇತರಿಸಿಕೊಂಡಿದೆ. ಬೇಳೆ, ಧಾನ್ಯಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೋಳಿ ಮಾಂಸ ಏರಿಕೆಯತ್ತ ಮುಖ ಮಾಡಿದೆ.

ಈರುಳ್ಳಿ ಮತ್ತೆ ಏರಿಕೆ: ಕಳೆದ ಎರಡು ವಾರದಿಂದ ಏರಿಕೆಯತ್ತ ಮುಖಮಾಡಿರುವ ಈರುಳ್ಳಿ ದರ ಈ ವಾರವೂ ಅದೇ ದಾರಿಯಲ್ಲಿ ಸಾಗಿದ್ದು, ಕೆ.ಜಿ ₹50ರ ಸಮೀಪಕ್ಕೆ ಬಂದಿದೆ. ಹೊಸದಾಗಿ ಮಾಲು ಬರುವವರೆಗೂ ಇದೇ ಸ್ಥಿತಿ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ. ಬೆಳ್ಳುಳ್ಳಿಯೂ ಹೆಚ್ಚಳ ದಾಖಲಿಸಿದೆ.

ಬೀನ್ಸ್ ಮತ್ತಷ್ಟು ಅಗ್ಗವಾಗಿದ್ದು, ಬೆಂಡೆಕಾಯಿ, ಹೂ ಕೋಸು, ತೊಂಡೆಕಾಯಿ ದರ ಅಲ್ಪ ಮಟ್ಟಿಗೆ ಕಡಿಮೆಯಾಗಿದೆ. ಗೆಡ್ಡೆಕೋಸು ಮತ್ತೆ ದುಬಾರಿಯಾಗಿದ್ದು, ಕೆ.ಜಿ ₹40–50ಕ್ಕೆ ಜಿಗಿದಿದೆ. ಬದನೆಕಾಯಿ, ಹಾಗಲಕಾಯಿ ಕೊಂಚ ಏರಿಕೆಯಾಗಿದೆ. ಟೊಮೆಟೊ ದರ ಇಳಿಕೆಯತ್ತಲೇ ಹೆಜ್ಜೆ ಹಾಕಿದ್ದು, ಕೆ.ಜಿ ₹10–15ಕ್ಕೆ ಕುಸಿದಿದೆ.

ಬಹುತೇಕ ದಿನಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಶುಂಠಿ ಬೆಲೆ ಕೆ.ಜಿಗೆ ₹20 ಕಡಿಮೆಯಾಗಿದೆ. ಹೊಸದಾಗಿ ಶುಂಠಿ ಮಾರುಕಟ್ಟೆಗೆ ಬರುತ್ತಿದ್ದು, ಬೆಲೆ ಇಳಿಕೆಗೆ ಕಾರಣವಾಗಿದೆ.

ಸೊಪ್ಪು ಚೇತರಿಕೆ: ಕಳೆದ ಕೆಲವು ವಾರಗಳಿಂದ ತೀವ್ರವಾಗಿ ಇಳಿಕೆ ಕಂಡಿದ್ದ ಸೊಪ್ಪಿನ ಧಾರಣೆ ಚೇತರಿಸಿಕೊಂಡಿದ್ದು, ಸಬ್ಬಕ್ಕಿ, ಮೆಂತ್ಯ ಸೊಪ್ಪಿಗೆ ಉತ್ತಮ ಬೆಲೆ ಬಂದಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಕೆ.ಜಿ ₹40–50, ಮೆಂತ್ಯ ಸೊಪ್ಪು ಕೆ.ಜಿ ₹50–60, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಏರಿಕೆ ಕಂಡಿದೆ.

ಹಣ್ಣು ದುಬಾರಿ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಣ್ಣುಗಳು ದುಬಾರಿಯಾಗಿವೆ. ದಾಳಿಂಬೆ ಒಮ್ಮೆಲೆ ಕೆ.ಜಿಗೆ ₹50 ಏರಿಕೆಯಾಗಿದ್ದು, ಕೆ.ಜಿ ₹250ಕ್ಕೆ ತಲುಪಿದೆ. ಏಲಕ್ಕಿ ಬಾಳೆಹಣ್ಣು ಮತ್ತಷ್ಟು ಗಗನಮುಖಿಯಾಗಿದ್ದು, ಕೆ.ಜಿ ₹120 ದಾಟಿದೆ. ಸೇಬು, ಕಲ್ಲಂಗಡಿ ಹಣ್ಣು ಸಹ ಹೆಚ್ಚಳವಾಗಿದೆ. ಕಿತ್ತಳೆ, ಪೈನಾಪಲ್ ಕೊಂಚ ಇಳಿಕೆಯಾಗಿದೆ.

ಅಡುಗೆ ಎಣ್ಣೆ: ಎಣ್ಣೆ ಬೆಲೆ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಗೋಲ್ಡ್‌ವಿನ್ನರ್ ಕೆ.ಜಿ ₹110–112, ಪಾಮಾಯಿಲ್ ಕೆ.ಜಿ ₹88–90, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ, ಧಾನ್ಯ: ಬೇಳೆ, ಧಾನ್ಯಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ತೊಗರಿ ಬೇಳೆ ಕೊಂಚ ಏರಿಕೆಯತ್ತ ಮುಖ ಮಾಡಿದ್ದು, ಬಟಾಣಿ ಮತ್ತೆ ಅಲ್ಪ ಹೆಚ್ಚಳವಾಗಿದೆ.

ಮಸಾಲೆ ಪದಾರ್ಥ: ಏಲಕ್ಕಿ, ಗಸಗಸೆ ದರ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಕಾಳು ಮೆಣಸು, ಜೀರಿಗೆ ಕೊಂಚ ಏರಿಕೆ ದಾಖಲಿಸಿವೆ. ಗೋಡಂಬಿ ಧಾರಣೆ ಇಳಿಕೆಯತ್ತ ಸಾಗಿದೆ.

ಧನ್ಯ ಕೆ.ಜಿ ₹110–150, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹200–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹190–210, ಹುಣಸೆಹಣ್ಣು ₹120–150, ಬೆಲ್ಲ ಕೆ.ಜಿ ₹50–52, ಕಾಳುಮೆಣಸು ಕೆ.ಜಿ ₹750–780, ಜೀರಿಗೆ ಕೆ.ಜಿ ₹320–340, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹880–920, ಗುಣಮಟ್ಟದ ಗಸಗಸೆ ಕೆ.ಜಿ ₹1,150–1,200, ಏಲಕ್ಕಿ ಕೆ.ಜಿ ₹2,800–3,000, ಬಾದಾಮಿ ಕೆ.ಜಿ ₹620–660, ಗೋಡಂಬಿ ಕೆ.ಜಿ ₹800–850, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಏರಿಕೆ: ಶ್ರಾವಣ ಮಾಸದ ಆರಂಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದ ಕೋಳಿ ಮಾಂಸದ ದರ ಈಗ ಏರಿಕೆಯತ್ತ ಸಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹110, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್‌ಲೆಸ್ ಕೆ.ಜಿ ₹200, ಮೊಟ್ಟೆಕೋಳಿ (ಫಾರಂ) ಕೆ.ಜಿ ₹110ಕ್ಕೆ ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT