ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ದುಬಾರಿ; ಸೇಬು ಸುಗ್ಗಿ

Last Updated 18 ಅಕ್ಟೋಬರ್ 2020, 5:58 IST
ಅಕ್ಷರ ಗಾತ್ರ

ತುಮಕೂರು: ಸ್ವಲ್ಪ ಮಟ್ಟಿಗೆ ತರಕಾರಿ ಬೆಲೆಯು ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದ್ದರೆ, ಈರುಳ್ಳಿ ಧಾರಣೆ ಏರಿಕೆಯತ್ತ ಮುಖಮಾಡಿದೆ. ಧಾನ್ಯ, ಹಣ್ಣುಗಳ ಧಾರಣೆಯಲ್ಲಿ ಸ್ಥಿರತೆ ಕಂಡುಬಂದಿದೆ. ಕಳೆದ ವಾರ ಇಳಿಕೆಯಾಗಿದ್ದ ಮೀನಿನ ಬೆಲೆ ದಿಢೀರ್ ಹೆಚ್ಚಳವಾಗಿದೆ.

ಈರುಳ್ಳಿ ಬೆಲೆ ಕೆ.ಜಿ ₹40ರಿಂದ ₹60ಕ್ಕೆ ಜಿಗಿದಿದೆ. ಟೊಮೆಟೊ ಬೆಲೆ ಕೊಂಚ ಏರಿಕೆಯಾಗಿದ್ದರೆ, ಬೀನ್ಸ್, ಕ್ಯಾರೇಟ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಹಿಂದಿನ ಎರಡು ವಾರಗಳಲ್ಲಿ ತರಕಾರಿ ಧಾರಣೆ ಏರಿಕೆಯತ್ತ ಸಾಗಿತ್ತು. ಆದರೆ ಈಗ ನಿಧಾನವಾಗಿ ಇಳಿಕೆಯತ್ತ ಹೆಜ್ಜೆ ಹಾಕಿದೆ.

ಉದ್ದಿನ ಬೇಳೆ ಕೆ.ಜಿ.ಗೆ ₹10 ದುಬಾರಿಯಾಗಿದ್ದು, ₹125ಕ್ಕೆ ಹೆಚ್ಚಳ ಕಂಡಿದೆ. ಅಡುಗೆ ಎಣ್ಣೆ ಧಾರಣೆಯಲ್ಲಿ ಸ್ಥಿರತೆ ಮುಂದುವರಿದಿದೆ. ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಆದರೆ ಸೇಬಿನ ಬೆಲೆ ಇಳಿಕೆಯತ್ತ ಸಾಗಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕೆ.ಜಿ.ಗೆ ₹20ರಿಂದ 30 ಕಡಿಮೆಯಾಗಿದೆ. ಪಪ್ಪಾಯ ಬೆಲೆ ತುಸು ದುಬಾರಿಯಾಗಿದೆ.

ಇಳಿಯದ ಕೋಳಿ ಬೆಲೆ:

ಕೋಳಿ ಬೆಲೆ ಇಳಿಯುತ್ತಿಲ್ಲ. ಮೊಟ್ಟೆಕೋಳಿ ಧಾರಣೆಯು ಕೆ.ಜಿ 185ರಲ್ಲೇ ಮುಂದುವರಿದಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹160ಕ್ಕೆ, ಬ್ರಾಯ್ಲರ್ ರೆಡಿ ಚಿಕನ್ ಕೆ.ಜಿ ₹220ಕ್ಕೆ, ಮೊಟ್ಟೆಯನ್ನು 1ಕ್ಕೆ ₹ 5.50ರಂತೆ ಮಾರಲಾಗುತ್ತಿದೆ. ಕುರಿ, ಮೇಕೆ ಮಾಂಸ ಕೆ.ಜಿ ₹650 ಇದೆ.

ಮೀನು ದುಬಾರಿ

ಮೀನು ಪ್ರಿಯರು ಕಳೆದ ವಾರ ಬಾಯಿ ಚಪ್ಪರಿಸಿದ್ದು, ಈ ವಾರ ‘ಖಾರ’ ಜಾಸ್ತಿಯಾಗಿದೆ.ನಗರದ ಮತ್ಸ ದರ್ಶಿನಿಯಲ್ಲಿ ಹಿಂದಿನ ವಾರ ತೀವ್ರ ಬೆಲೆ ಕುಸಿತ ಕಂಡಿದ್ದರೆ, ಈಗ ಒಮ್ಮೆಲೆ ದುಬಾರಿಯಾಗಿದೆ. ಬಂಗುಡೆ ಕೆ.ಜಿ.ಗೆ ₹30 ಏರಿಕೆಯಾಗಿ, ₹250ಕ್ಕೆ ತಲುಪಿದೆ. ಬೂತಾಯಿ ಕೆ.ಜಿ ₹170ರಿಂದ ₹240ಕ್ಕೆ, ಅಂಜಲ್ ಕೆ.ಜಿ ₹350ರಿಂದ ₹550ಕ್ಕೆ ಹೆಚ್ಚಳವಾಗಿದೆ. ಬೊಳಿಂಜಿರ್ ₹180ರಲ್ಲೇ ಸ್ಥಿರವಾಗಿದೆ. ಬಿಳಿ ಮಾಂಜಿ ₹490ರಿಂದ ₹600ಕ್ಕೆ, ಸೀಗಡಿ ಕೆ.ಜಿ ₹500ರಿಂದ ₹540ಕ್ಕೆ ಜಿಗಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT