ಗುರುವಾರ , ನವೆಂಬರ್ 21, 2019
24 °C

ನಾಳೆಯಿಂದ ಜಿಲ್ಲೆಯಲ್ಲಿ ದಸರಾ ಕ್ರೀಡಾಕೂಟ

Published:
Updated:

ತುಮಕೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಂಗಳವಾರದಿಂದ (ಸೆ.10ರಿಂದ 17ರವರೆಗೆ) ಆಯಾ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಿದೆ.

ಕ್ರೀಡಾಕೂಟ ಆಯಾ ತಾಲ್ಲೂಕುಗಳಲ್ಲಿ ನಿಗದಿತ ದಿನ ನಡೆಯಲಿದೆ. ಸೆ.10ರಂದು ತುರುವೇಕೆರೆ, 11ರಂದು ತಿಪಟೂರು, 13ರಂದು ಚಿಕ್ಕನಾಯಕನಹಳ್ಳಿ ಹಾಗೂ ಶಿರಾ, 14ರಂದು ಪಾವಗಡ, 15ರಂದು ಕುಣಿಗಲ್, ತುಮಕೂರು, ಗುಬ್ಬಿ, 16ರಂದು ಕೊರಟಗೆರೆ, 17ರಂದು ಮಧುಗಿರಿ ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿವೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಪುರುಷ ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್, ಉದ್ದಜಿಗಿತ, ಎತ್ತರ ಜಿಗಿತ, ಟ್ರಿಪಲ್ ಜಂಪ್, ಭರ್ಚಿ ಎಸೆತ, ಗುಂಡು ಎಸೆತ, ರಿಲೇ, ಕಬಡ್ಡಿ, ಕೊಕ್ಕೊ, ವಾಲಿಬಾಲ್, ಫುಟ್‌ಬಾಲ್ ಕ್ರೀಡಾಕೂಟ ನಡೆಯಲಿದೆ. ಮಹಿಳಾ ವಿಭಾಗದಲ್ಲಿ ಅಥ್ಲೆಟಿಕ್ಸ್, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಭರ್ಚಿ ಎಸೆತ, ಗುಂಡು ಎಸೆತ, ರಿಲೆ, ಕಬಡ್ಡಿ, ಕೊಕ್ಕೊ, ವಾಲಿಬಾಲ್ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದ್ದಾರೆ.

ಕ್ರೀಡಾಪಟುಗಳು ನಿಗದಿತ ದಿನ ಬೆಳಿಗ್ಗೆ 9.30ಕ್ಕೆ ಸಂಘಟಕರಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ– 0816–2278124 ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)