ಪಾಲಿಕೆ ಅಧಿಕಾರಿಗಳ ಕಾರ್ಯಾಚರಣೆ: 40 ಕೆ.ಜಿ ಪ್ಲಾಸ್ಟಿಕ್ ವಶ

7

ಪಾಲಿಕೆ ಅಧಿಕಾರಿಗಳ ಕಾರ್ಯಾಚರಣೆ: 40 ಕೆ.ಜಿ ಪ್ಲಾಸ್ಟಿಕ್ ವಶ

Published:
Updated:
Deccan Herald

ತುಮಕೂರು: ನಗರದ ಅಶೋಕ ರಸ್ತೆಯ ಬೇಕರಿಯೊಂದರ ಮೇಲೆ ಹಾಗೂ ತಳ್ಳುಗಾಡಿಗಳ ಮೇಲೆ ಮಹಾನಗರ ಪಾಲಿಕೆಯ ಪರಿಸರ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಮವಾರ ರಾತ್ರಿ ದಿಢೀರ್ ಕಾರ್ಯಾಚರಣೆ ನಡೆಸಿ ಸುಮಾರು 40 ಕೆ.ಜಿ.ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.

ಬೇಕರಿಯಲ್ಲಿಯೇ 20 ಕೆ.ಜಿ.ಗೂ ಹೆಚ್ಚಿನ ಪ್ಲಾಸ್ಟಿಕ್ ದೊರೆತಿದೆ. 10ಕ್ಕೂ ಹೆಚ್ಚು ನೈಟ್ ಕ್ಯಾಂಟೀನ್‌ಗಳಿಂದ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಈ ಕ್ಯಾಂಟೀನ್‌ಗಳಿಂದ ಹೇರಳವಾದ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿಯೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದೆ ರಾತ್ರಿ ತಿಂದು ಎಸೆದ ಪ್ಲಾಸ್ಟಿಕ್ ರಾಶಿರಾಶಿಯಾಗಿ ಬಿದ್ದಿರುತ್ತಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !