ಬುಧವಾರ, ಸೆಪ್ಟೆಂಬರ್ 18, 2019
25 °C

ಬಿಡಾಡಿ ದನಗಳ ಹಾವಳಿಗೆ ಸೂಕ್ತ ಕ್ರಮ

Published:
Updated:
Prajavani

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿ ದನ, ಕುದುರೆ ಹಾಗೂ ಎಮ್ಮೆಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ತಿಳಿಸಿದ್ದಾರೆ.

ನಗರದಲ್ಲಿ ಬೀಡಾಡಿ ದನ, ಕುದುರೆ ಹಾಗೂ ಎಮ್ಮೆಗಳು ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ಅಪಘಾತ ಹಾಗೂ ಇನ್ನಿತರೆ ಅವಘಡಗಳಿಗೆ ಕಾರಣವಾಗಿದೆ. ಸಾರ್ವಜನಿಕರಿಂದ ಈ ಬಗ್ಗೆ ದೂರುಗಳು ಬರುತ್ತಿವೆ. ವಾರಸುದಾರರು ತಮ್ಮ ಸಾಕು ಪ್ರಾಣಿಗಳನ್ನು ರಸ್ತೆಗಳಿಗೆ ಬಿಡಬಾರದು. ತಮ್ಮ ಮನೆ ಆವರಣದಲ್ಲಿ ಇಟ್ಟುಕೊಳ್ಳಬೇಕು. ತಪ್ಪಿದಲ್ಲಿ ರಾಸುಗಳನ್ನು ಗೋಶಾಲೆಗೆ ಸಾಗಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಕಟಣೆ ಹೊರಡಿಸಿದ 3 ದಿನಗಳ ತರುವಾಯ ಮಾಲೀಕರು ಸೂಕ್ತ ಕ್ರಮಕೈಗೊಳ್ಳದಿದ್ದರೆ ಬೀಡಾಡಿಯಾಗಿ ಓಡಾಡುತ್ತಿರುವ ದನ, ಕುದುರೆ ಹಾಗೂ ಎಮ್ಮೆಗಳನ್ನು ಹಿಡಿಯಲಾಗುವುದು. ಇದರಿಂದ ಆಗುವ ಯಾವುದೇ ರೀತಿಯ ಕಷ್ಟ-ನಷ್ಟಗಳಿಗೆ ಪಾಲಿಕೆ ಜವಾಬ್ದಾರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)