ಪಾವಗಡ: ಪಟ್ಟಣದಲ್ಲಿ ಮಂಗಳವಾರ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಯಿತು.

ಶಾಸಕ ಎಚ್.ವಿ. ವೆಂಕಟೇಶ್ ಮಾತನಾಡಿ, ರೈತರಿಗೆ ಅಗತ್ಯ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಹೆಚ್ಚಿನ ಮಳೆಯಾದರೆ ನೀರಿನ ಸಮಸ್ಯೆ ಬಗೆ ಹರಿಯುತ್ತದೆ ಎಂದರು.

ಈಗಾಗಲೇ 405 ಕ್ವಿಂಟಲ್ ಶೇಂಗಾ ದಾಸ್ತಾನು ಮಾಡಲಾಗಿದ್ದು, ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ. ಪ್ರತಿ ಹೋಬಳಿಯಲ್ಲಿ ಎರಡು ಹಳ್ಳಿಗಳನ್ನು ಆಯ್ಕೆ ಮಾಡಿ, ಒಂದು ಹಳ್ಳಿಗೆ 150 ಚೀಲ ಶೇಂಗಾ ಬೀಜ ನೀಡಲಾಗುತ್ತದೆ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಅಜಯ್ ಕುಮಾರ್, ತಾಲ್ಲೂಕಿನಲ್ಲಿ ರೈತರು ಭೂಮಿ ಹದ ಮಾಡಿಕೊಂಡಿದ್ದು, ರೈತರಿಗೆ ಅಗತ್ಯ ಶೇಂಗಾ, ತೊಗರಿ, ಹಲಸಂದೆ, ರಾಗಿ, ಭತ್ತ, ಮೆಕ್ಕೆಜೋಳ ಬೀಜವನ್ನು ಐದು ವಿತರಣಾ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎಂದರು.

ಕೆಒಎಫ್ ಜಿಲ್ಲಾ ವ್ಯವಸ್ಥಾಪಕಿ ಲತಾ, ಗುರುರಾಜ್, ಬಾಲಾಜಿ, ಕೃಷಿ ಅಧಿಕಾರಿ ಶಂಶದ್ ಉನ್ನಿಸಾ, ಸುದೇಶ್ ಬಾಬು, ಶಂಕರ್ ರೆಡ್ಡಿ, ಪಿ.ಎಚ್. ರಾಜೇಶ್, ಎ.ಎನ್. ನಾರಾಯಣಪ್ಪ, ಪೂಜಾರಪ್ಪ, ಶಿವು, ನರಸಿಂಹ ರೆಡ್ಡಿ, ಕೃಷ್ಣರಾವ್, ಡಿ.ಮಂಜುನಾಥ್, ಕಲ್ಪವೃಕ್ಷ ರವಿ, ಶಿವಮೂರ್ತಿ, ಚಂದ್ರಶೇಖರ್ ರೆಡ್ಡಿ, ವಾಗೀಶ್ ಆರಾಧ್ಯ, ಆರ್.ಎ. ಹನುಮಂತರಾಯಪ್ಪ, ನಜುರುಲ್ಲಾ, ಹರೀಶ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-17-1665514994

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.