ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 58.57 ಲಕ್ಷ ಉಳಿತಾಯ ಬಜೆಟ್

ಪಾವಗಡ: ಆಯವ್ಯಯ ಮಂಡಿಸಿದ ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ
Last Updated 13 ಮಾರ್ಚ್ 2020, 11:29 IST
ಅಕ್ಷರ ಗಾತ್ರ

ಪಾವಗಡ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ ₹ 58.87 ಲಕ್ಷ ರೂಪಾಯಿ ಉಳಿತಾಯ ಆಯವ್ಯಯ ಮಂಡಿಸಿದರು.

ಸ್ವಯಂ ಘೋಷಿತ ಆಸ್ತಿ ತೆರಿಗೆ ₹ 1.79 ಕೋಟಿ, ನೀರಿನ ಶುಲ್ಕ 1.27 ಕೋಟಿ, ಬಡಾವಣೆಗಳ ಅಭಿವೃದ್ಧಿ ಶುಲ್ಕ ಸೇರಿದಂತೆ ₹ 5.69 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.

ಹರಾಜು ಪ್ರಕ್ರಿಯೆ, ನೀರು ಸರಬರಾಜು, ಬೀದಿದೀಪ ನಿರ್ವಹಣೆ, ಸ್ವಚ್ಛ0ತೆ, ಬಿಡಾಡಿ ಹಂದಿಗಳು, ನಾಯಿಗಳನ್ನು ಹಿಡಿಯುವುದು, ಪ್ರವಾಸ ಇತ್ಯಾದಿ ವೆಚ್ಚ ₹ 5.1 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಆಯವ್ಯಯದ ವಿಶೇಷತೆಗಳು: ಸಾರ್ವಜನಿಕರ ಸುಗಮ ಸಂಚಾರಕ್ಕೆ ಬೈ ಪಾಸ್ ರಸ್ತೆ ನಿರ್ಮಾಣ ಮಾಡುವುದು. ಸೋಲಾರ್ ಸಿಟಿ ನಾಮ ಫಲಕ ಅಳವಡಿಸುವುದು. ಬಸ್ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿರ್ಮಿಸುವುದಾಗಿ ತಿಳಿಸಿದರು.

ಬಸ್ ನಿಲ್ದಾಣದಲ್ಲಿನ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು. ಒತ್ತುವರಿಯಾಗಿರುವ ಉದ್ಯಾನವನದ ಬಳಿ ಈಗಾಗಲೆ ಪುರಸಭೆಗೆ ಸೇರಿದ್ದ ಎಂಬ ನಾಮ ಫಲಕ ಅಳವಡಿಸಲಾಗಿದೆ. ಅನಧಿಕೃತವಾಗಿ ನಾಮಫಲಕ ತೆರವುಗೊಳಿಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಉಪವಿಬಾಗಾಧಿಕಾರಿ ಡಾ. ಕೆ ನಂದಿನಿ ದೇವಿ, ತಹಶೀಲ್ದಾರ್ ವರದರಾಜು, ಕಂದಾಯ ನಿರೀಕ್ಷಕ ರಾಜಗೋಪಾಲ್, ಗ್ರಾಮ ಲೆಕ್ಕಿಗ ಗಿರೀಶ್, ಆರೋಗ್ಯ ನಿರೀಕ್ಷಕ ಷಂಶುದ್ಧಾ, ಎಂಜಿನಿಯರ್ ಅರುಣ್, ಪರಿಸರ ಎಂಜಿನಿಯರ್ ಮಹೇಶ್, ನಾಗಬೂಷಣ್, ಮಂಜುನಾಥ್, ಜ್ಞಾನೇಶ್ವರ್, ಹರೀಶ್, ವೇಣು, ಗೊರ್ತಿ ನಾಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT