ಪಾವಗಡ: ತಾಲ್ಲೂಕಿನಾದ್ಯಂತ ಮಳೆಗಾಗಿ ರೈತರು ಎದುರು ನೋಡುತ್ತಿದ್ದರೆ, ಕುಡಿಯುವ ನೀರು, ಮೇವಿಲ್ಲದೆ ಜಾನುವಾರುಗಳು ಸೊರಗುತ್ತಿವೆ.

ಅಂತರ್ಜಲ ಬತ್ತಿ, ತಾಲ್ಲೂಕಿನಾದ್ಯಂತ 40 ರಿಂದ 50 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಹಳೆಯ ತೋಟಗಳೂ ಒಣಗುತ್ತಿವೆ. ಅಡಿಕೆ, ತೆಂಗು, ವೀಳ್ಯದೆಲೆ ಸೇರಿದಂತೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೊರೆ ಹೋಗುತ್ತಿದ್ದಾರೆ. ಕೊಳವೆ ಬಾವಿ ಕೊರೆಸಿ ನೀರು ಸಿಕ್ಕಿದೆ ಎಂದು ಖುಷಿ ಪಡುವ ವೇಳೆಗೆ ಕೆಲ ಗಂಟೆಗಳಲ್ಲೇ ನೀರು ನಿಂತು ಹೋಗುತ್ತಿದೆ.

1,200 ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುವುದಿಲ್ಲ. ಒಂದು ವೇಳೆ ನೀರು ಸಿಕ್ಕರೆ, ಪಂಪ್ಸೆಟ್, ಮೋಟರ್, ವಿದ್ಯುತ್ ಪರಿವರ್ತಕ, ಕೇಬಲ್ ಪೈಪ್, ಸ್ಟಾರ್ಟರ್ ಇತ್ಯಾದಿ ಅಳವಡಿಸಲು ₹6 ರಿಂದ ₹8 ಲಕ್ಷ ಬೇಕಾಗುತ್ತದೆ. ಇಷ್ಟೆಲ್ಲ ವ್ಯಯಿಸಿದರೂ ಯಾವಾಗ ನೀರು ನಿಲ್ಲುತ್ತದೆಯೊ ಎಂಬ ಆತಂಕ ರೈತರ ನಿದ್ದೆಗೆಡಿಸಿದೆ. ಸಾಲ ತೀರಿಸಲು ದಶಕಗಳೇ ಬೇಕಾಗುತ್ತದೆ. ಮಕ್ಕಳಂತೆ ಬೆಳೆಸಿದ ತೋಟಗಳನ್ನು ಉಳಿಸಿಕೊಳ್ಳಲು ಮನೆ, ಜಮೀನು ಮಾರಾಟ ಮಾಡುವ ಹಂತಕ್ಕೆ ರೈತರು ತಲುಪಿದ್ದಾರೆ.

ತಾಲ್ಲೂಕಿನ ಏಕೈಕ ನದಿ ಉತ್ತರಪಿನಾಕಿನಿಗೆ ಕಟ್ಟಲಾಗಿದ್ದ ಡ್ಯಾಂನಲ್ಲಿ ಹನಿ ನೀರು ಸಹ ಇಲ್ಲ. ಪಟ್ಟಣದ ಸುತ್ತಮುತ್ತಲ ವ್ಯಾಪ್ತಿಯ ನೀರಿನ ಮೂಲವಾಗಿದ್ದ ಅಗಸರಕುಂಟೆಯ ಒಡಲು ಬರಿದಾಗಿದೆ. ಬಹುತೇಕ ಕೆರೆ– ಕುಂಟೆಗಳು ಮಳೆಗಾಲದಲ್ಲಿಯೇ ನೀರಿಲ್ಲದೆ ಒಣಗಿದ್ದವು. ಈಗ ಬರದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ತಾಲ್ಲೂಕಿನ 34 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆರಂಭಗೊಂಡಿದ್ದ ತುಂಗಭದ್ರಾ ಕುಡಿಯುವ ನೀರು ಸರಬರಾಜು ಯೋಜನೆ ಸದ್ಯಕ್ಕೆ ತುಂಗಭದ್ರಾ ಡ್ಯಾಂನಲ್ಲಿ ನೀರಿಲ್ಲದೆ ಸ್ಥಗಿತಗೊಂಡಿದೆ. ಮೇ 3ರಂದು ಕೊಳವೆ ಮೂಲಕ ನೀರು ಸರಬರಾಜಾಗುವುದು ಸ್ಥಗಿತಗೊಂಡಿತು. ಸಾವಿರಾರು ಕೋಟಿ ಖರ್ಚು ಮಾಡಿದರೂ ಮತ್ತೆ ನೀರು ಪೂರೈಸಲು ಕೊಳವೆ ಬಾವಿ, ಟ್ಯಾಂಕರ್ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಈಗಾಗಲೆ ತಾಲ್ಲೂಕಿನ ಹೊಸಹಳ್ಳಿ ತಾಂಡ, ಚಿತ್ತಗಾನಹಳ್ಳಿ, ಕರೆಕ್ಯಾತಾನಹಳ್ಳಿ, ಆರ್ ಹೊಸಕೋಟೆ, ಕಣಿವೇನಹಳ್ಳಿ ತಾಂಡ ಸೇರಿದಂತೆ 10 ಗ್ರಾಮಗಳಲ್ಲಿ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಿ, ನೀರು ಪೂರೈಸಲು ಸಿದ್ಧತೆ ನಡೆಸಿದರೆ, ಕೊಳವೆ ಬಾವಿಗಳಲ್ಲಿ ನೀರು ಸಿಗದ ರಾಜವಂತಿ, ಪೋತಗಾನಹಳ್ಳಿ, ಸಾಸಲಕುಂಟೆ, ಗುಜ್ಜನಡು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ನೀಡಿರುವ ಅಂಕಿ ಅಂಶದ ಪ್ರಕಾರ 46 ಕೊಳವೆ ಬಾವಿಗಳನ್ನು ಕೊರೆಸಲು ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಮೊದಲ ಹಂತದಲ್ಲಿ 22, ಎರಡನೇ ಹಂತದಲ್ಲಿ 24 ಕೊಳವೆ ಬಾವಿಗಳನ್ನು ಕೊರೆಸುವ ಯೋಜನೆ ರೂಪಿಸಲಾಗಿದೆ. ತಾಲ್ಲೂಕಿನಲ್ಲಿ ಈಗಾಗಲೇ ಕೊರೆಸಲಾದ 10 ಕೊಳವೆ ಬಾವಿಗಳಲ್ಲಿ 4 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿಲ್ಲ.

ಕೆರೆ ಕುಂಟೆಯಲ್ಲಿ ನೀರಿಲ್ಲದ ಕಾರಣ ಜಾನುವಾರುಗಳೂ ಸೊರಗುತ್ತಿವೆ. ಮೇವಿಲ್ಲದೆ ಪರದಾಡುತ್ತಿವೆ. ದುಪ್ಪಟ್ಟ ಹಣ ನೀಡಿದರೂ ಮೇವು ಸಿಗದೆ ರೈತರು ಜಾನುವಾರುಗಳ ಜೀವ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-17-1626192182

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.