ಪಾವಗಡ: ರೈತರ ಜಮೀನುಗಳಿಗೆ ಹೋಗುವ ನಕಾಶೆ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವ ಸೋಲಾರ್ ಕಂಪನಿ ಶೀಘ್ರವೇ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಎಎಪಿ ನೇತೃತ್ವದಲ್ಲಿ ಪೊರಕೆ, ತಮಟೆಗಳೊಂದಿಗೆ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ ಮಾತನಾಡಿ, ಚೆನ್ನೈ ಮೂಲದ ಖಾಸಗಿ ಸೋಲಾರ್ ಕಂಪನಿ ತಿಮ್ಮಾಪುರದಿಂದ ಶ್ರೀರಂಗಪುರಕ್ಕೆ ಹಾದು ಹೋಗುವ ನಕಾಶೆ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ನಕಾಶೆ ರಸ್ತೆಗೆ ಅಡ್ಡಲಾಗಿ ಸೋಲಾರ್ ಕಂಪನಿ ತಡೆಗೋಡೆ ನಿರ್ಮಿಸಿ ರೈತರು, ಕೂಲಿ ಕಾರ್ಮಿಕರು, ಸ್ಥಳೀಯ ಗ್ರಾಮಸ್ಥರು, ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಪಕ್ಷದ ತಾಲ್ಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಸರ್ಕಾರದ ಸುತ್ತೋಲೆ ಅನ್ವಯ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಬೇಕು. ಸೋಲಾರ್ ಕಂಪನಿಯ ಒತ್ತುವರಿಗೆ ಸಹಕಾರ ನೀಡಿದವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ರೈತರು ಬೇಸಾಯ ಮಾಡಲು ಜಮೀನುಗಳಿಗೆ ಹೋಗಲು ಮತ್ತು ರೈತರ ಜಮೀನುಗಳಲ್ಲಿ ಬೆಳೆಯುವ ದವಸ ದಾನ್ಯ, ತರಕಾರಿ ತರಲು ಎತ್ತಿನ ಗಾಡಿ, ಉಳುಮೆ ಮಾಡುವ ಟ್ರ್ಯಾಕ್ಟರ್ ಇತ್ಯಾದಿ ವಾಹನಗಳು ಓಡಾಡಲು ಅವಕಾಶವಿಲ್ಲದಂತೆ ಪಳವಳ್ಳಿ ಗ್ರಾಮದ ಸರ್ವೆ ನಂ. 371, 374, 375 ರ ಜಮೀನುಗಳಲ್ಲಿ ಹಾದು ಹೋಗುವ ನಕಾಶೆ ರಸ್ತೆಗೆ ತಡೆಗೋಡೆ ಹಾಕಿ ರಸ್ತೆ ಮುಚ್ಚಿರುವುದರಿಂದ ರೈತರು ಬೆಳೆದ ಪಸಲುಗಳನ್ನು ಜಮೀನಿನಿಂದ ಸಾಗಿಸಲೂ ಸಾಧ್ಯವಾಗದೆ ರೈತರು ನಷ್ಟ ಅನುಭವಿಸುವಂತಾಗಿದೆ ಎಂದರು.

ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರೇಡ್ 2 ತಹಶೀಲ್ದಾರ್ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎನ್ ನಾರಾಯಣ, ಮಹಿಳಾ ಘಟಕದ ಅಧ್ಯಕ್ಷ ಅಕ್ಕಮ್ಮ, ಡಿ.ಹನುಮಂತ, ಆಂಜನೇಯಲು, ಪೋಲೆ ನಾಯ್ಕ, ಈರಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-17-754503089

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.