ಪಾವಗಡ: ಮಾಜಿ ಸಚಿವ ವೆಂಕಟರಮಣಪ್ಪ ಅವರ ನಿಧನಕ್ಕೆ ಅಭಿಮಾನಿಗಳು, ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.

ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶುಕ್ರವಾರ ಬೆಳಗಿನ ಜಾವ ಆಸ್ಪತ್ರೆಯಲ್ಲಿ ನಿಧನರಾದರು.

ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ವೆಂಕಟರಮಣಪ್ಪ ಅವರನ್ನು ತಾಲ್ಲೂಕಿನ ಜನತೆ ಅಭಿಮಾನದಿಂದ ಪೆದ್ದಯ್ಯ(ದೊಡ್ಡಪ್ಪ) ಎಂದೇ ಕರೆಯುತ್ತಿದ್ದರು. ತಾಲ್ಲೂಕಿನ ಹನುಮಂತನಹಳ್ಳಿಯ ತೋಟದ ಮನೆಗೆ ನಿತ್ಯ ನೂರಾರು ಮಂದಿ ಒಂದಿಲ್ಲೊಂದು ಕೆಲಸ ಮಾಡಿಸಿಕೊಡುವಂತೆ ಎಡತಾಕುತ್ತಿದ್ದರು.

ಭೇಟಿಗೆ ಬರುತ್ತಿದ್ದ ಜನರ ಕೈ ಹಿಡಿದು ಅವರ ಹೆಸರು ಸಂಬೋಧಿಸಿ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಸಾವಿರಾರು ಕಾರ್ಯಕರ್ತರಿದ್ದರೂ ಪ್ರತಿಯೊಬ್ಬರ ಹೆಸರು, ಊರನ್ನು ವೆಂಕಟರಮಣಪ್ಪ ನೆನಪಿನಲ್ಲಿಟ್ಟುಕೊಂಡಿರುತ್ತಿದ್ದರು. ಪದೇ ಪದೇ ಹೇಳಿದ್ದನ್ನೇ ಹೇಳುತ್ತಿದ್ದರೆ ಅವರು ಹೇಳಿದ ಮಾತು ಕೇಳದವರನ್ನು ಪ್ರೀತಿಯಿಂದ ‘ಊರ್ಕೆ ಉಂಡ್ರಾ, ಚಪ್ಪಿಂದಿ ಇನು, ನೀ ಪನಿ ಅವತುಂದಿ’ (ಸುಮ್ನೆ ಇರು ಹೇಳಿದ್ದು ಕೇಳು, ನಿನ್ನ ಕೆಲಸ ಆಗುತ್ತೆ) ಎಂದು ಪ್ರೀತಿಯಿಂದ ಗದರಿಸುತ್ತಿದ್ದರು.

ಆರದ ಒಲೆ: ‘ತೋಟದ ಮನೆಯ ಒಲೆ ಆರೋದಿಲ್ಲ’ ಎನ್ನುವುದು ತಾಲ್ಲೂಕಿನಲ್ಲಿ ಜನಜನಿತ. ಜನ ಸಾಮಾನ್ಯರು, ಹಿರಿಯ ಮುಖಂಡರು, ರಾಜಕಾರಣಿಗಳು, ಅಧಿಕಾರಿಗಳು ಯಾರೇ ಅವರನ್ನು ಭೇಟಿ ಮಾಡಲು ತೋಟದ ಮನೆಗೆ ಹೋದರೂ ಅವರಿಗೆ ಕಾಫಿ, ಟೀ, ಮಜ್ಜಿಗೆ ಕೊಡಿಸದೆ ಕಳುಹಿಸುತ್ತಿರಲಿಲ್ಲ. ತಿಂಡಿ, ಊಟದ ವೇಳೆಗೆ ಹೋದವರು ಕಡ್ಡಾಯವಾಗಿ ಮಾಜಿ ಸಚಿವರ ಜೊತೆಯಲ್ಲಿ ಕುಳಿತು ಆಹಾರ ಸೇವಿಸಿಕೊಂಡೇ ಹೋಗಬೇಕು ಎಂಬ ಷರತ್ತು ಅವರದ್ದು.

ರೈಲಿನ ಚಿಹ್ನೆ ಪಡೆದಿದ್ದರು: ತಾಲ್ಲೂಕಿಗೆ ರೈಲ್ವೆ ಯೋಜನೆ ತರಲೇ ಬೇಕು ಎಂಬ ಹಠ ವೆಂಕಟರಮಣಪ್ಪ ಅವರದ್ದು. 2008ರಲ್ಲಿ ಕಾರಣಾಂತರಗಳಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದ ಅವರು ರೈಲಿನ ಚಿಹ್ನೆ ಆಯ್ಕೆ ಮಾಡಿಕೊಂಡಿದ್ದರು. ಸದ್ಯ ಅವರ ಕನಸಿನ ಯೋಜನೆ ಪಾವಗಡ ಪಟ್ಟಣದವರೆಗೆ ತಲುಪಿದೆ.

ತಾಲ್ಲೂಕಿಗೆ ಅನುದಾನ ತರಲು, ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಬರಲು ವಿಧಾನಸಭೆ ಕಲಾಪಗಳಲ್ಲಿ ಗಲಾಟೆ ಮಾಡಿ ಯೋಜನೆಗಳನ್ನು ಹಾಕಿಕೊಡುವಂತೆ ಒತ್ತಾಯಿಸುತ್ತಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ಮುಖ್ಯಮಂತ್ರಿ ಸಚಿವರು ಕಾರ್ಯಕ್ರಮಗಳ ವೇದಿಕೆಗಳಲ್ಲಿ ನೆನಪು ಮಾಡಿಕೊಂಡಿದ್ದಾರೆ.

ನಾಗಲಮಡಿಕೆ ಉತ್ತರ, ಪಿನಾಕಿನಿ ಚೆಕ್ ಡ್ಯಾಂನಿಂದ ಪಟ್ಟಣಕ್ಕೆ ಕುಡಿಯುವ ನೀರು ತರಲು ಶ್ರಮ, ಶಾಲಾ ಕಾಲೇಜು, ನೀರಾವರಿ ಯೋಜನೆ ತಾಲ್ಲೂಕಿಗೆ ತರುವಲ್ಲಿ ಅವರು ಶ್ರಮಿಸಿದ್ದಾರೆ ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-17-1689425445

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.