ಪಾವಗಡ: ತಾಲ್ಲೂಕಿನಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಕಳೆದ ವಾರ ಬಿದ್ದ ಅಲ್ಪ ಪ್ರಮಾಣದ ಮಳೆ ರೈತರ ದುಗುಡ ದೂರ ಮಾಡಿದರೂ ತಾಲ್ಲೂಕಿನಲ್ಲಿ ಬರದ ಛಾಯೆ ಮುಂದುವರೆದಿದೆ.

ಹಿಂದೆಂದು ಕಂಡರಿಯದ ತಾಪಮಾನ ಈ ಬಾರಿ ತಾಲ್ಲೂಕಿನ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಸಾಕಷ್ಟ ಮಂದಿ ಸನ್ಸ್ಟ್ರೋಕ್ಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಜ್ವರ, ಗೊಂದಲ, ಮಾತಿನಲ್ಲಿ ತೊದಲುವಿಕೆ, ಪ್ರಜ್ಞೆ ತಪ್ಪುವುದು, ಚರ್ಮ ಬಿಸಿಯಾಗಿ, ಒಣಗಿದಂತೆ ಇರುವುದು, ವಾಕರಿಕೆ, ವಾಂತಿ, ವಿಪರೀತ ಸುಸ್ತು, ತಲೆನೋವು, ತಲೆತಿರುಗುವಿಕೆಯಂತಹ ಆರೋಗ್ಯ ಸಮಸ್ಯೆಯಿಂದ ಜನತೆ ಬಳಲುತ್ತಿದ್ದಾರೆ. ಮಕ್ಕಳು, ವೃದ್ಧರು ಸನ್ಸ್ಟ್ರೋಕ್ಗೆ ಬೇಗನೆ ತುತ್ತಾಗುತ್ತಿದ್ದಾರೆ.

ಒಂದೆಡೆ ಆರೋಗ್ಯ ಸಮಸ್ಯೆ ತಾಲ್ಲೂಕಿನ ಜನತೆಯನ್ನು ಕಾಡಿದರೆ ಮತ್ತೊಂದೆಡೆ ನೀರಿನ ಸಮಸ್ಯೆ ತೀವ್ರವಾಗಿದೆ. ಅಂತರ್ಜಲ ಮಟ್ಟ ಕುಸಿದು ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಸಾಲ ಮಾಡಿ ಕೊಳವೆ ಬಾವಿ ಕೊರೆಸುತ್ತಿದ್ದಾರೆ.

ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿರುವುದಿಂದ ಪಂಪ್, ಮೋಟಾರ್, ಸ್ಟಾರ್ಟರ್ಗಳು ಕೆಟ್ಟು ಹೋಗಿ ರೈತರು ಕಂಗಾಲಾಗಿದ್ದಾರೆ. ದುರಸ್ತಿಗಾಗಿ ಸಾಲದ ಸುಳಿಯಲ್ಲಿ ಅನಿವಾರ್ಯವಾಗಿ ಸಿಲುಕುತ್ತಿದ್ದಾರೆ.

ಬೆಲೆ ಏರಿಕೆ: ಇರಾನ್- ಅಮೆರಿಕ, ಇಸ್ರೇಲ್ ಯುದ್ಧ, ಬೇಡಿಕೆ ಹೆಚ್ಚಳದಿಂದ ಕೊಳವೆ ಬಾವಿಯಿಂದ ಬೆಳೆಗಳಿಗೆ ನೀರೆತ್ತಲು ಅಗತ್ಯವಿರುವ ಪೈಪ್, ಕೇಬಲ್, ಪಂಪ್, ಮೋಟಋ್, ಸ್ಟಾರ್ಟರ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಮಗ್ರಿಗಳ ಬೆಲೆ ಗಗನಮುಖಿಯಾಗಿದೆ. ಇದು ರೈತರ ನಿದ್ದೆಗೆಡೆಸಿದೆ.

ಬತ್ತಿರುವ ಉತ್ತರ ಪಿನಾಕಿನಿ ಡ್ಯಾಂ: ಕೆಲ ವರ್ಷಗಳ ಹಿಂದೆ ಆಂಧ್ರದ ಅಂದ್ರಿನಿವಾ ಯೋಜನೆಯಡಿ ನಾಗಲಮಡಿಕೆ ಉತ್ತರಪಿನಾಕಿನಿ ಚೆಕ್ ಡ್ಯಾಂ ಮೂಲಕ ಆಂಧ್ರದ ಪೇರೂರು ಜಲಾಶಯಕ್ಕೆ ನೀರು ಹರಿಸಲಾಗಿತ್ತು. ನಾಗಲಮಡಿಕೆ ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ಅಂತರ್ಜಲ ಉತ್ತಮವಾಗಿತ್ತು. ಈ ಬಾರಿ ಉತ್ತರ ಪಿನಾಕಿನಿ ಒಡಲು ಸಂಪೂರ್ಣ ಬತ್ತಿದೆ. ಈ ಭಾಗದ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಕೊಳವೆ ಬಾವಿಗಳ ಮೊರೆ ಹೋಗುತ್ತಿರುವುದು ಬರದ ತೀವ್ರತೆಗೆ ನಿದರ್ಶನ.

ಕಳೆದ ವರ್ಷ ಸಾಕಷ್ಟು ಮಳೆ ಬೀಳದ ಕಾರಣ ತಾಲ್ಲೂಕಿನ ಯಾವುದೇ ಕೆರೆಯಲ್ಲಿ ನೀರು ಸಂಗ್ರಹವಾಗಿರಲಿಲ್ಲ. ಇದರೊಟ್ಟಿಗೆ ಮಿತಿಮೀರಿದ ತಾಪಮಾನ ನೀರಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ಅನುಷ್ಠಾನವಾಗದ ನೀರಾವರಿ ಯೋಜನೆಗಳು: ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಭದ್ರಾ ಮೇಲ್ದಂಡೆ ಯೋಜನೆ ತಾಲ್ಲೂಕಿನ ಮಟ್ಟಿಗೆ ಮರೀಚಿಕೆಯಾಗಿದೆ. ಕೆರೆಗಳಿಗೆ ನೀರು ಬರಲಿದೆ ಎಂಬ ತಾಲ್ಲೂಕಿನ ಜನರ ಕನಸು ದಶಕಗಳಿಂದ ನನಸಾಗಿಲ್ಲ. ಮಧುಗಿರಿ ತಾಲ್ಲೂಕಿನವರೆಗೆ ಬಂದಿರುವ ಎತ್ತಿನಹೊಳೆ ಯೋಜನೆ ಸರ್ಕಾರದ ಮಲತಾಯಿ ಧೋರಣೆಯಿಂದ ತಾಲ್ಲೂಕಿನ ಗಡಿ ತಲುಪಿಲ್ಲ. ರಾಜ್ಯ, ದೇಶಕ್ಕೆ ಸೋಲಾರ್ ಪಾರ್ಕ್ ಮೂಲಕ ಸಾವಿರಾರು ಕೋಟಿ ಆದಾಯ ನೀಡುತ್ತಿರುವ ತಾಲ್ಲೂಕಿನ ಜನತೆ, ವಿದ್ಯುತ್, ನೀರಿಗಾಗಿ ಇಂದಿಗೂ ಪರದಾಡುತ್ತಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದ ಕುಡಿಯುವ ತುಂಗಭದ್ರಾ ಯೋಜನೆ: ತಾಲ್ಲೂಕಿನ ಜನತೆಗೆ ಕುಡಿಯುವ ನೀರು ಪೂರೈಸುವ ತುಂಗಭದ್ರಾ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಪಟ್ಟಣ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ಮುಕ್ತಾಯವಾಗಿಲ್ಲ. ಹೀಗಾಗಿ ಜಲ ಜೀವನ ಮಿಷನ್ ಮೂಲಕ ತುಂಗಭದ್ರಾ ಕುಡಿಯುವ ನೀರು ಪೂರೈಸುವ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನತೆ ದೂರದೂರುಗಳಿಗೆ ಹೋಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಹೆಚ್ಚುತ್ತಿರುವ ಸಂಘರ್ಷ: ತೀವ್ರ ಬರದ ಹಿನ್ನೆಲೆ ಬೆಟ್ಟ, ಗುಡ್ಡ, ಅರಣ್ಯ ಪ್ರದೇಶದಲ್ಲಿ ನೀರು ಆಹಾರವಿಲ್ಲ. ಸಂಜೆಯಾಗುತ್ತಲೇ ಕುಡಿಯುವ ನೀರು, ಆಹಾರಕ್ಕಾಗಿ ಜಮೀನು ತೋಟ, ಹಳ್ಳಿಗಳತ್ತ ಕರಡಿ, ಚಿರತೆ ಸೇರಿದಂತೆ ವನ್ಯ ಜೀವಿಗಳು ಬರುತ್ತಿವೆ. ಕರಡಿಗಳು ದಾಳಿ ಮಾಡಿ ರೈತರು ಗಾಯಗೊಂಡಿರುವ ಸಾಕಷ್ಟು ನಿದರ್ಶನಗಳಿವೆ. ರೈತರು ತೋಟಗಳಲ್ಲಿ ಅಳವಡಿಸಿರುವ ಪೈಪ್, ವಾಲ್ವ್ ಕಿತ್ತು ಹಾಕಿ, ಮರ ಗಿಡ, ಬೆಳೆಗಳನ್ನು ವನ್ಯ ಜೀವಿಗಳು ಹಾಳು ಮಾಡುತ್ತಿವೆ.

ಜಾನುವಾರುಗಳ ಹಾಹಾಕಾರ: ತಾಲ್ಲೂಕಿನ ಹಾಲು ಉತ್ಪಾದಕರು ಜಾನುವಾರುಗಳಿಗೆ ಮೇವು ಪೂರೈಸಲಾಗದೆ, ಜಾನುವಾರುಗಳನ್ನು ಮಾರುವ ಸ್ಥಿತಿಗೆ ತಲುಪಿದ್ದಾರೆ. ರಾಮಕೃಷ್ಣ ಆಶ್ರಮದಿಂದ ಸ್ವಾಮಿ ಜಪಾನಂದಜಿ ಮೇವು ವಿತರಿಸುತ್ತಿರುವುದನ್ನು ಹೊರತುಪಡಿಸಿ ರೈತ ಮುಖಂಡರ ಗೋಶಾಲೆ ಆರಂಭಿಸಬೇಕು ಎಂಬ ಕೂಗು ಸರ್ಕಾರ, ಅಧಿಕಾರಿಗಳ ಕಿವಿಗೆ ಬಿದ್ದಿಲ್ಲ. ದುಪ್ಪಟ್ಟು ಹಣ ಕೊಟ್ಟರೂ ಮೇವು ಸಿಗುತ್ತಿಲ್ಲ. ಕೆಲ ದಿನಗಳ ಹಿಂದೆ ಬಿದ್ದ ಅಲ್ಪ ಪ್ರಮಾಣದ ಮಳೆ ಮೇವಿನ ಸಮಸ್ಯೆ ದೂರಾಗಬಹುದು ಎಂಬ ಆಸೆಯನ್ನು ರೈತರಲ್ಲಿ ಮೂಡಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-17-1134987324

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.