ಪಾವಗಡ: ಪರವಾನಗಿ ಭೂಮಾಪಕರ ಅನಿರ್ದಿಷ್ಟಾವಧಿ ಮುಷ್ಕರದಿಂದ ಕೆಲಸ ಕಾರ್ಯಗಳು ಸ್ಥಗಿತಗೊಂಡು ತಾಲ್ಲೂಕಿನ ರೈತರು ಯಾವುದೇ ವಹಿವಾಟು ಮಾಡಲಾಗದೆ ತೀವ್ರ ಸಂಕಷ್ಟದಲ್ಲಿದ್ದಾರೆ.

ಸರ್ಕಾರದ ಮಹತ್ತರ ಪೋಡಿ ಮುಕ್ತ ಗ್ರಾಮ ಯೋಜನೆ ಮುಷ್ಕರದಿಂದಾಗಿ ಹಳ್ಳ ಹಿಡಿಯುವಂತಾಗಿದೆ. ತಾಲ್ಲೂಕಿಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರೂ ಸಹ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.

ಭೂಮಾಪನ, ಕಂದಾಯ ಇಲಾಖೆಗಳಲ್ಲಿ ರೈತರಿಗೆ ಹೆಚ್ಚಿನ ಕೆಲಸ ಕಾರ್ಯಗಳಾಗಬೇಕಿದೆ. ನಿತ್ಯ ರೈತರು ಒಂದಿಲ್ಲೊಂದು ಕೆಲಸಕ್ಕಾಗಿ ಭೂಮಾಪನ ಕಚೇರಿಗೆ ಬರುತ್ತಾರೆ. ಆದರೆ ಸುಮಾರು ಎರಡು ತಿಂಗಳಿಂದ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಭೂ ಮಾಪಕರು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಸರ್ವೆ ಇಲಾಖೆಯ ಕೆಲಸ ಕಾರ್ಯಗಳು ಸ್ಥಗಿತೊಂಡಿವೆ. ರೈತರಿಗೆ ತೀವ್ರ ತೊಂದರೆ ಉಂಟಾಗಿದೆ.

ತುರ್ತು ಇರುವ ರೈತರು ಜಮೀನು ಮಾರಾಟ ಮಾಡಲು, ಕೊಳ್ಳಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಜಮೀನು ಸರ್ವೆ, ಹದ್ದುಬಸ್ತು, ನಕ್ಷೆ ತಯಾರಿ, ಪೋಡಿ, 11 ಇ, ದಾರಿ ನಕ್ಷೆ ಸೇರಿದಂತೆ ವಿವಿಧ ಸರ್ವೆ ಸಂಬಂಧಿತ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ರೈತರು ವಿವಿಧ ಸೇವೆಗಳಿಗಾಗಿ ಸಲ್ಲಿಸಿರುವ ಅರ್ಜಿಗಳು ಹಲ ತಿಂಗಳಿಂದ ಯಥಾಸ್ಥಿತಿಯಲ್ಲಿ ಸಾಗುತ್ತಿವೆ. ದಿನದಿಂದ ದಿನಕ್ಕೆ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿವೆಯೇ ಹೊರತು ವಿಲೇವಾರಿಯಾಗುತ್ತಿಲ್ಲ.

ಭೂ ಮಾಪನ ಇಲಾಖೆ ಕಚೇರಿಯಲ್ಲಿ 3 ಮಂದಿ ಪರ್ಯಾವೇಕ್ಷಕರು, ಅಡವಿ ಭೂ ಮಾಪಕರು 3 ಮಂದಿ ಇದ್ದಾರೆ. ರೆಕಾರ್ಡ್ ರೂಂ ಸೇರಿದಂತೆ 6 ಮಂದಿ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 20 ಪರವಾನಗಿ ಭೂ ಮಾಪಕರು ಇದ್ದಾರೆ.

2 ಸಾವಿರಕ್ಕೂ ಹೆಚ್ಚಿನ ಹದ್ದುಬಸ್ತು, ತತ್ಕಾಲ್ ಪೋಡಿ, ಪೋಡಿ ಮುಕ್ತ, 11 ಇ, ನಕ್ಷೆ ತಯಾರಿ, ದರಖಾಸ್ತು ಪೋಡಿ ಇತ್ಯಾದಿ ಅರ್ಜಿಗಳು ಬಾಕಿ ಇವೆ.

ಇರುವ ಸರ್ಕಾರಿ ಸಿಬ್ಬಂದಿ ಸಕಾಲಕ್ಕೆ ಕಚೇರಿಗೆ ಆಗಮಿಸುತ್ತಿಲ್ಲ. ರೈತರು ಖಾಲಿ ಕುರ್ಚಿಗಳನ್ನು ನೋಡಿಕೊಂಡು ಹಿಂದಿರುಗಬೇಕಿದೆ. ರೆಕಾರ್ಡ್ ರೂಂನಲ್ಲಿ ಹೆಚ್ಚೆಚ್ಚು ಹಣ ನೀಡುವ ಕಾರ್ಪೊರೇಟ್ ಸೋಲಾರ್ ಕಂಪನಿಗಳಿಗೆ ಮಾತ್ರ ಶೀಘ್ರ ದಾಖಲೆಗಳ ನಕಲು ನೀಡಲಾಗುತ್ತಿದೆ. ನಕಲು ಕೋರಿ ಅರ್ಜಿ ಸಲ್ಲಿಸುವ ರೈತರಿಗೆ ರಶೀದಿ ನೀಡುತ್ತಿಲ್ಲ. ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ನಕಲು ನೀಡುತ್ತಿಲ್ಲ ಎಂಬುದು ರೈತರ ಆರೋಪ.

ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಸಾಲ ಪಡೆಯಲು ಅಗತ್ಯ ದಾಖಲೆ ಪಡೆಯಲೂ ರೈತರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಮುಂಗಾರು ಬೆಳೆ ಇಡಲು ಸಾಧ್ಯವಾಗದು ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಮುಷ್ಕರದಿಂದ ಇರುವ ಸರ್ಕಾರಿ ಭೂ ಮಾಪಕರ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿದೆ. ಸರ್ಕಾರಿ ಭೂಮಾಪಕರು ಕಚೇರಿ ಕೆಲಸಕ್ಕೆ ಸೀಮಿತರಾಗುವಂತಾಗಿದೆ. ಜಮೀನು ಹಾಗೂ ನಿವೇಶನಗಳ ಖರೀದಿ- ಮಾರಾಟ ಪ್ರಕ್ರಿಯೆ, ಹಕ್ಕು ಬದಲಾವಣೆ ಕೆಲಸ ಸಾಕಷ್ಟು ವಿಳಂಬಗೊಂಡಿದ್ದು, ಸ್ವತ್ತು ಸಂಬಂಧಿತ ವ್ಯವಹಾರಗಳಿಗೆ ಅಡ್ಡಿಯಾಗಿದೆ.

ಈಗಾಗಲೆ ಇಲಾಖೆಯಲ್ಲಿ ನೂರಾರು ಅರ್ಜಿಗಳು ಬಾಕಿ ಉಳಿದಿದ್ದು, ಮುಷ್ಕರ ಮುಂದುವರಿಯುತ್ತಿರುವ ಹಿನ್ನೆಲೆ ಹೆಚ್ಚಿನ ಸಮಸ್ಯೆ ತಲೆದೋರಲಿದೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಪ್ರತಿದಿನ ಕಚೇರಿಗೆ ಅಲೆದಾಡುತ್ತಿದ್ದಾರೆ.

ಸರ್ಕಾರ ಈ ಕೂಡಲೆ ಪರವಾನಗಿ ಭೂಮಾಪಕರ ಮನವೊಲಿಸುವ ಕೆಲಸ ಮಾಡಬೇಕು. ಆ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-17-356497371

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.