ಪಾವಗಡ: ಯುಗಾದಿ, ರಂಜಾನ್ ಹಿನ್ನೆಲೆ ನೂರಾರು ಜನರು ಎಲ್ಪಿಜಿ ಸಿಲಿಂಡರ್ಗಾಗಿ ಪಟ್ಟಣ ಸೇರಿದಂತೆ ವಿವಿಧೆಡೆಯ ವಿತರಣಾ ಕೇಂದ್ರಗಳ ಮುಂಭಾಗ ಸರದಿಯಲ್ಲಿ ನಿಂತು ಕಾದರು.

ಹಬ್ಬದ ವೇಳೆ ರಜೆ ಇರುವುದರಿಂದ ಮುಂದಿನ ದಿನಗಳಲ್ಲಿ ಸಿಲಿಂಡರ್ ಅಭಾವ ತಲೆದೋರುವ ಆತಂಕದಿಂದ ಗ್ರಾಹಕರು ತಾಲ್ಲೂಕಿನ ವಿವಿಧ ವಿತರಣಾ ಕೇಂದ್ರಗಳ ಮುಂಭಾಗ ಬಿಸಿಲನ್ನೂ ಲೆಕ್ಕಿಸದೆ ಹಲವು ಗಂಟೆ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದರ ಏರಿಕೆ: ಸಿಲಿಂಡರ್ಗಳ ಅಭಾವದ ಹಿನ್ನೆಲೆ ಹೋಟೆಲ್ ಬೇಕರಿಗಳಲ್ಲಿ ದರ ಏರಿಕೆ ಮಾಡಲಾಗಿದೆ. ಇದು ಜನರಿಗೆ ತೀವ್ರ ಹೊರೆಯಾಗಿ ಪರಿಣಮಿಸಿದೆ. ಹೋಟೆಲ್ಗಳಲ್ಲಿ ಎಲ್ಪಿಜಿ ದರ ಎಂದು ಪ್ರತ್ಯೇಕವಾಗಿ ಹೆಚ್ಚಿನ ಬೆಲೆ ವಸೂಲಿ ಮಾಡಲಾಗುತ್ತಿದೆ.

‘ಇಂದು ಸಿಲಿಂಡರ್ ದಾಸ್ತಾನು ಬಂದಿದ್ದು, ಈಗಾಗಲೆ ಆನ್ಲೈನ್ನಲ್ಲಿ ಬುಕ್ ಮಾಡಿಕೊಂಡಿರುವವರಿಗೆ ವಿತರಿಸಲಾಗುತ್ತಿದೆ. ಜ್ಯೇಷ್ಠತಾ ಆಧಾರದಲ್ಲಿ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ’ ಎಂದು ಆಹಾರ ಶಿರಸ್ತೇದಾರ್ ಶಶಿಕಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.