ಪಾವಗಡ: ಮೇಕೆಗಳಿಗಾಗಿ ವ್ಯಕ್ತಿಯನ್ನು (ಕುರಿಗಾಹಿ) ಕೊಲೆ ಮಾಡಿ, ಸಂತೆಯಲ್ಲಿ ಮೇಕೆ ಮಾರಾಟ ಮಾಡುವಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ.

ಪಾವಗಡ ತಾಲ್ಲೂಕಿನ ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ, ದೇವಲಕೆರೆ ಗ್ರಾಮದ ನರಸಿಂಹಪ್ಪ (60) ಕೊಲೆಯಾದವರು. ಕರಿಯಮ್ಮನಪಾಳ್ಯದ ಮಣಿಕಂಠ (29) ಆರೋಪಿ.

ನರಸಿಂಹಪ್ಪ ದೇವಲಕೆರೆ ಹೊರವಲಯದ ತಿಪ್ಮಪ್ಪನ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಮೇಕೆ ಮೇಯಿಸಲು ಹೋಗಿದ್ದರು. ಈ ವೇಳೆ ಮಣಿಕಂಠ ಕುಡುಗೋಲಿನಿಂದ ನರಸಿಂಹಪ್ಪನ ಕುತ್ತಿಗೆ, ಎಡಗೈ ಬೆರಳು ಕತ್ತರಿಸಿ ಹತ್ಯೆ ಮಾಡಿ, ಸುಮಾರು 30 ಮೇಕೆಗಳನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಹೊಡೆದುಕೊಂಡು ಹೋಗಿದ್ದರು.

ಸಂಜೆಯಾದರೂ ನರಸಿಂಹಪ್ಪ ಮನೆಗೆ ಬಾರದಿರುವುದರಿಂದ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತಲಿನ ಗ್ರಾಮಸ್ಥರನ್ನು ವಿಚಾರಿಸಿದ್ದರು. ರಂಗಸಮುದ್ರ, ವದನಕಲ್ಲು ಮಾರ್ಗವಾಗಿ ಮೇಕೆಗಳನ್ನು ಹಿರಿಯೂರಿಗೆ ಹೊಡೆದುಕೊಂಡು ಹೋಗಿರುವ ವಿಚಾರ ಗೊತ್ತಾಗಿತ್ತು.

ಹಿರಿಯೂರಿನ ಸಂತೆಯಲ್ಲಿ ಮೇಕೆಗಳನ್ನು ಮಾರಾಟ ಮಾಡಲು ಮಣಿಕಂಠ ಪ್ರಯತ್ನಿಸುತ್ತಿದ್ದಾಗ ಮೃತ ನರಸಿಂಹಪ್ಪ ಅವರ ಮಗ ಮಂಜುನಾಥ್ ಮೇಕೆಗಳನ್ನು ಗುರುತು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಹತ್ಯೆಯ ವಿಚಾರ ತಿಳಿದಿದೆ.

ಅರಸೀಕೆರೆ ಪೊಲೀಸರು ಆರೋಪಿಯನ್ನು ಅರಣ್ಯ ಪ್ರದೇಶದ ಘಟನಾ ಸ್ಥಳಕ್ಕೆ ಕರೆದೊಯ್ದು ಮೃತ ದೇಹ ಪತ್ತೆ ಮಾಡಿದ್ದಾರೆ. ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.