ಪಾವಗಡ: ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಭಾನುವಾರ ಪರಿಶಿಷ್ಟರ ಕುಂದುಕೊರತೆ ಸಭೆ ನಡೆಯಿತು.

ಯಾವುದೇ ಕಾರ್ಯಕ್ರಮಗಳಿಗೆ ಡಿ.ಜೆ.ಗೆ ಅನುಮತಿ ನೀಡಬಾರದು. ಡಿಜೆ ಇಂದ ಸಮಸ್ಯೆಯಾಗುತ್ತದೆ ಎಂದು ಬೇಕರಿ ನಾಗರಾಜು ಒತ್ತಾಯಿಸಿದರು.

ಗ್ರಾಮೀಣ ಬಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಜಗಳಗಳು ಹೆಚ್ಚುತ್ತಿವೆ. ಹೊಸಹಳ್ಳಿ ಗ್ರಾಮದಲ್ಲಿ ಶಾಲೆಯ ಹತ್ತಿರ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಜರುಗಸಬೇಕು ಎಂದು ನಲಿಗಾನಹಳ್ಳಿ ಮಂಜುನಾಥ್ ಒತ್ತಾಯಿಸಿದರು.

ತಿರುಮಣಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ. ಇಸ್ಪೀಟ್ ಜೂಜಾಟ ಹೆಚ್ಚಿದೆ. ಜೂಜಾಟ, ಮರಳು ಸಾಗಣೆಗೆ ಕಡಿವಾಣ ಹಾಕಬೇಕು ಎಂದು ಆಪ್ಬಂಡೆ ಗೋಪಾಲ್ ಆಗ್ರಹಿಸಿದರು.

ಡಿವೈಎಸ್ಪಿ ಜಿ. ಮಂಜುನಾಥ್ ಮಾತನಾಡಿ, ಎಲ್ಲ ದೂರುಗಳ ಬಗ್ಗೆ ಶೀಘ್ರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಇನ್ಸ್ಪೆಕ್ಟರ್ ಕೆ. ಸುರೇಶ್, ಗ್ರಾಮೀಣ ಭಾಗದ ಬೀಟ್ ಸಿಬ್ಬಂದಿಗೆ ಅಲ್ಲಿನ ಸಂಪೂರ್ಣ ಚಟುವಟಿಕೆ ಕಲೆಹಾಕುವಂತೆ ತಿಳಿಸಲಾಗಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಮುಖಂಡ ವೆಂಕಟೇಶಪ್ಪ, ಗುಟ್ಟಹಳ್ಳಿ ಅಂಜಪ್ಪ, ನಲಿಗಾನಹಳ್ಳಿ ಮಂಜುನಾಥ್, ಪಾತಣ್ಣ, ಆಪ್ ಬಂಡೆ ಗೋಪಾಲ್, ಮೀನಕುಂಟನಹಳ್ಳಿ ನರಸಿಂಹಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-17-414701468

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.