ಪಾವಗಡ: ಪಟ್ಟಣದ ಶನೈಶ್ಚರ ದೇಗುಲಕ್ಕೆ ಶನಿವಾರ ಸಹಸ್ರಾರು ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸಿದರು. ಇದೇ ಮೊದಲ ಬಾರಿಗೆ ಸುಮಾರು 200 ಕೆ.ಜಿ ಬಗೆ ಬಗೆಯ ಹೂವುಗಳಿಂದ ಮಾಡಲಾಗಿದ್ದ ಪುಷ್ಪ ಯಾಗ ಆಕರ್ಷಣೀಯವಾಗಿತ್ತು.

ತೈಲಾಭಿಷೇಕ, ಸರ್ವೆ ಸೇವೆ ಸೇರಿದಂತೆ ಶೀತಲಾಂಭ ದೇವಿಗೆ ಕುಂಕುಮಾರ್ಚನೆ, ಮಡಿಲಕ್ಕಿ ಸೇವೆ ಮಾಡಲಾಯಿತು.

ಪ್ರಾತಃಕಾಲ ಪೂಜೆ, ನವಗ್ರಹ ಮೂಲ ಮೂರ್ತಿಗಳಿಗೆ ಏಕಾದಶವಾರು ರುದ್ರಾಭಿಷೇಕ, ನವಗ್ರಹ ಹೋಮ, ಪ್ರಧಾನ ಮೂಲಮಂತ್ರ ಹೋಮ, ಗಾಯಿತ್ರಿ ಹೋಮ, ಮಹಾಪೂರ್ಣಾಹುತಿ, ಕಲಶೋದಕ ಮಾರ್ಜನೆ, ಮಂಗಳಾರತಿ ನಡೆದವು.

ಮೂಲ ನವಗ್ರಹ ವಿಗ್ರಹಗಳು, ಸೀತಲಾದೇವಿ ಮೂಲ ಯಂತ್ರಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ ಜೈಷ್ಠಾದೇವಿ ಸಮೇತ ಶನೈಶ್ಚರ ದೀಪಾಲಂಕೃತ ಉತ್ಸವವು ವಿಜೃಂಭಣೆಯಿಂದ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-17-956637916

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.