ಸೋಮವಾರ, ಅಕ್ಟೋಬರ್ 26, 2020
20 °C

ಪಾವಗಡ: ಹತ್ತರಲ್ಲಿ ಯಾರಿಗೆ ಅದೃಷ್ಟ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ನಿಗದಿಯಾಗಿದೆ.

ಮೀಸಲಾತಿ ಪ್ರಕಟಗೊಂಡ ಕೂಡಲೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಕುರ್ಚಿಗಾಗಿ ಕಸರತ್ತು ಆರಂಭಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಮುಖರು ಯಾರಿಗೆ ಒಲವು ತೋರುತ್ತಾರೊ ಅವರು ಅಧ್ಯಕ್ಷ, ಉಪಾಧ್ಯಕ್ಷರಾಗಲಿದ್ದಾರೆ. ಆಕಾಂಕ್ಷಿಗಳು ಬೆಂಬಲಿಗರೊಂದಿಗೆ ಅಧಿಕಾರಕ್ಕಾಗಿ ಶಾಸಕ ವೆಂಕಟರವಣಪ್ಪ ಅವರ ಬಳಿಗೆ ಎಡತಾಕುತ್ತಿದ್ದಾರೆ. ಶಾಸಕರ ಕೃಪಾ ಕಟಾಕ್ಷ ಯಾರ ಮೇಲಿದೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.

23 ವಾರ್ಡ್‌ಗಳ ಪೈಕಿ 20 ಮಂದಿ ಕಾಂಗ್ರೆಸ್, 2 ಜೆಡಿಎಸ್ ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇರುವುದರಿಂದ ಪಕ್ಷದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗುವುದು ಖಚಿತ.

ಆದರೆ ಅಧ್ಯಕ್ಷ ಸ್ಥಾನ ಪಡೆಯುವ ಆಕಾಂಕ್ಷಿಗಳ ಪಟ್ಟಿಯಲ್ಲಿ 2ನೇ ವಾರ್ಡ್‌ನ ಡಿ.ವೇಲುರಾಜು, 23 ನೇ ವಾರ್ಡ್ ರಾಮಾಂಜಿನಪ್ಪ, 11ನೇ ವಾರ್ಡ್‌ನ ಧನಲಕ್ಷ್ಮಮ್ಮ, 9ನೇ ವಾರ್ಡ್‌ನ ಬಿ.ಗಂಗಮ್ಮ ಅವರು ಮುಂಚೂಣಿಯಲ್ಲಿದ್ದಾರೆ.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿರುವುದರಿಂದ 10ನೇ ವಾರ್ಡ್ ಸದಸ್ಯೆ ಉಮಾದೇವಿ, 12ನೇ ವಾರ್ಡ್ ಸದಸ್ಯೆ ಅನ್ನಪೂರ್ಣಮ್ಮ, 15ನೇ ವಾರ್ಡ್‌ನ ಸುಧಾಲಕ್ಷ್ಮಿ, 18ನೇ ವಾರ್ಡ್‌ನ ಶಶಿಕಲಾ, 20ನೇ ವಾರ್ಡ್‌ ಸದಸ್ಯೆ ಜಾನ್ಹವಿ ಆಕಾಂಕ್ಷಿಗಳಾಗಿದ್ದಾರೆ.

10 ಮಂದಿ ಮಹಿಳಾ ಸದಸ್ಯರಿದ್ದಾರೆ. ಇವರಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಗೆಲುವು ಸಾಧಿಸಿರುವವರೂ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವಿದೆ. ಹೀಗಾಗಿ ಉಪಾಧ್ಯಕ್ಷೆ ಸ್ಥಾನಕ್ಕೆ
ಪೈಪೋಟಿ ನಡೆಸುವವರ ಪಟ್ಟಿ ದೊಡ್ಡದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.