ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವಳ್ಳೂರು ಗ್ರಾಮದಲ್ಲಿ ಕೆಸರುಕಂಬ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಯುಗಾದಿ ಹಬ್ಬದಂದು ಜಾತ್ರಾ ಮಹೋತ್ಸವ ಆರಂಭವಾಗಿ ನವಮಿ ಹಬ್ಬದವರೆಗೆ ಸಾಗುತ್ತದೆ. ಭಕ್ತಿ, ಸಂಪ್ರದಾಯ, ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ವಿಶಿಷ್ಟ ಉತ್ಸವವಾಗಿದೆ.

ಯುಗಾದಿ ದಿನದಂದು ಆಂಧ್ರದ ನಲ್ಲಗುಟ್ಟಪಲ್ಲಿ ಊರಿಗೆ ಹೋಗಿ, ಅಲ್ಲಿ ಬುತ್ತಿ ಹಾಗೂ ತೆಂಗಿನಕಾಯಿಗಳೊಂದಿಗೆ ಪೂಜಾ ಸಾಮಗ್ರಿ ತರಲಾಯಿತು. ಎರಡು ದಿನಗಳ ಬಳಿಕ ಪಕ್ಕದ ತಿಮ್ಮಾಪುರ ಗ್ರಾಮದ ಬಳಿ ಉತ್ತರ ಪಿನಾಕಿನಿ ನದಿಗೆ ಪೂಜೆ ಸಲ್ಲಿಸಿ ಪೂಜಾ ಸಾಮಗ್ರಿಗಳನ್ನು ದೇಗುಲಕ್ಕೆ ತಂದು ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.

‘ಉಟ್ಲು ಮರ ಹತ್ತುವುದು’ (ಕೆಸರುಕಂಬ) ಉಟ್ಲು ಪರಿಷೆ ಸಂಜೆ ಜನಸಮೂಹದ ನಡುವೆ ನಡೆಯಿತು. ಕೆಸರಿನ ಕಂಬ ಏರುವುದನ್ನು ವೀಕ್ಷಿಸಲು ಸಹಸ್ರಾರು ಮಂದಿ ಸೇರಿದ್ದರು. ಕಂಬ ಹತ್ತಿದವರಿಗೆ ಬಹುಮಾನ ವಿತರಿಸಲಾಯಿತು.

ಸಪ್ತಮಾತೃಕೆಯರು ಸೇರಿ ‘ಕುಂಕಾಲು’ ಕಾರ್ಯಕ್ರಮ ನಡೆಸಲಾಯಿತು. ಸಂಜೆ ಪೂಜಾ ಸಾಮಗ್ರಿಗಳನ್ನು ಬುಟ್ಟಿಗೆ ಸೇರಿಸಿ ಊರಿನಲ್ಲಿ ಮೆರವಣಿಗೆ ನಡೆಸಲಾಯಿತು.

ಉದ್ಯಮಿ ಗೋಪಿನಾಥರೆಡ್ಡಿ, ಡಾ.ರವೀಂದ್ರರೆಡ್ಡಿ, ಮುರಳಿಮೋಹನ ರೆಡ್ಡಿ, ತಿಮ್ಮಾರೆಡ್ಡಿ, ಹರಿಕೃಷ್ಣ ರೆಡ್ಡಿ, ವೆಂಕಟ್ರಾಮಿ ರೆಡ್ಡಿ, ಶಿವಾರೆಡ್ಡಿ, ಜಯರಾಮಿ ರೆಡ್ಡಿ, ಚನ್ನಾರೆಡ್ಡಿ, ಸದಾಶಿವರೆಡ್ಡಿ, ಶ್ರೀಕೃಷ್ಣ ರೆಡ್ಡಿ, ಚೆನ್ನಕೇಶವ ರೆಡ್ಡಿ, ಬ್ರಹ್ಮಾನಂದ ರೆಡ್ಡಿ, ಶ್ರೀನಿವಾಸ ರೆಡ್ಡಿ, ಶಶಿ, ನಾಗಭೂಷಣ, ಬೊರೆಡ್ಡಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-17-1435474473

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.