ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ, ಕಂದಾಯ ಅದಾಲತ್

Last Updated 17 ಮಾರ್ಚ್ 2021, 3:15 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಹೋಬಳಿಯ ಶ್ರಾವಂಡನಹಳ್ಳಿಯಲ್ಲಿ ಮಂಗಳವಾರ ತಾಲ್ಲೂಕು ಆಡಳಿತ, ದೊಡ್ಡಮಾಲೂರು ಗ್ರಾಮ ಪಂಚಾಯಿತಿ ಮತ್ತು ಕೊಡಿಗೇನಹಳ್ಳಿ ನಾಡಕಚೇರಿಯಿಂದ ಆಯೋಜಿಸಿದ್ದ ಪಿಂಚಣಿ ಹಾಗೂ ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಬಂದಿದ್ದ ಮಾನಸಿಕ ಅಸ್ವಸ್ಥ ಮಕ್ಕಳು, ಅಂಗವಿಕಲರು, ವೃದ್ಧರು ಸೇರಿದಂತೆ ಮಾಸಾಶನ ವಂಚಿತರನ್ನು ನೋಡಿದ ತಾಲ್ಲೂಕು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮರುಗಿದರು.

ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾತನಾಡಿ, ದೊಡ್ಡಮಾಲುರು ಗ್ರಾಮ ಪಂಚಾಯಿತಿ ಅಧ್ಯಕ್ಷ
ಎಸ್.ಆರ್. ಪಂಚಾಕ್ಷರಯ್ಯ ‘ನನಗೆ ಕೆಲವು ದಿನಗಳಿಂದ ಶ್ರಾವಂಡನಹಳ್ಳಿಯಲ್ಲಿ ಹಲವಾರು ಜನರು ಮಾಸಾಶನ ವಂಚಿತರಾಗಿದ್ದು, ಅವರು ಪ್ರತಿದಿನ ನಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಪಿಂಚಣಿ ಅದಾಲತ್‌ಗೆ ಬಂದವರನ್ನು ನೋಡಿ ಸಮಸ್ಯೆಯ ಗಂಭೀರತೆ ಅರ್ಥವಾಗಿದೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಮಾರ್ಚ್‌ 26ರಂದು ಕೊಡಿಗೇನಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆದೇಶ ಪತ್ರ ವಿತರಿಸುತ್ತೇವೆ’ ಎಂದರು.
ತಹಶೀಲ್ದಾರ್ ಸ್ಟೆಲ್ಲಾ ವರ್ಗಿಸ್ ಮಾತನಾಡಿ, ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ತಾಲ್ಲೂಕು ಆಡಳಿತ ಆಯಾ ವೃತ್ತಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ವಿವಿಧ ಯೋಜನೆಗಳ ಮಾಸಾಶನ ಅರ್ಜಿಗಳು 82 ಹಾಗೂ ಪೌತಿ ಖಾತೆ ಬದಲಾವಣೆಗೆ 34 ಮತ್ತು ಪಹಣೆ ತಿದ್ದುಪಡಿಗೆ 3 ಅರ್ಜಿಗಳು ಬಂದವು.

ಪ್ರೊಬೆಷರಿನರಿ ತಹಶೀಲ್ದಾರ್ ಸುರೇಶಚಾರಿ, ತಾಲ್ಲೂಕು ಪಂಚಾಯಿತಿಸದಸ್ಯ ಜೆ.ಡಿ.ವೆಂಕಟೇಶ್ ಮಾತ
ನಾಡಿದರು. ಗ್ರೇಡ್ 2 ತಹಶೀಲ್ದಾರ್ ಕಮಲಮ್ಮ, ಸಾಮಾಜಿಕ ಭದ್ರತೆ ಶಿರಸ್ತೆದಾರದಾರ ಲಕ್ಷ್ಮೀದೇವಮ್ಮ, ಹಕ್ಕ
ದಾಖಲೆಗಳ ಶಿರಸ್ತೇದಾರ್ ಜಿ. ಶ್ರೀನಿವಾಸ್ ಕುಮಾರ್, ಉಪ ತಹಶೀಲ್ದಾರ್ ಕೆ. ಮಂಜುನಾಥ್, ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT