ನಗರ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅಗತ್ಯ: ಜಿ.ಬಿ.ಜ್ಯೋತಿ ಗಣೇಶ್

7
ಸಿಎಸ್‌ಐ ಬಡಾವಣೆಯ ನಾಗರಿಕ ಸಮಿತಿಯು ಆಯೋಜಿಸಿದ್ಧ ಕಾರ್ಯಕ್ರಮ

ನಗರ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅಗತ್ಯ: ಜಿ.ಬಿ.ಜ್ಯೋತಿ ಗಣೇಶ್

Published:
Updated:
Deccan Herald

ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲ ವರ್ಗದ ಜನರ ಅಭಿಪ್ರಾಯವನ್ನು ಕ್ರೋಢೀಕರಿಸಲು ಅಧ್ಯಯನ ಕೇಂದ್ರವನ್ನು ತೆರೆದಿದ್ದು, ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಹೇಳಿದರು.

ನಗರದ 15ನೇ ವಾರ್ಡ್ ವ್ಯಾಪ್ತಿಯ ಸಿಎಸ್‌ಐ ಬಡಾವಣೆಯಲ್ಲಿ ನಾಗರಿಕ ಸಮಿತಿವತಿಯಿಂದ ಆಯೋಜಿಸಿದ್ಧ ಪಾಲಿಕೆ ನೂತನ ಸದಸ್ಯರಿಗೆ ಹಾಗೂ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾಗಿರುವ ತುಮಕೂರು ನಗರದ ಅಭಿವೃದ್ಧಿ ಈಗಷ್ಟೇ ಆರಂಭವಾಗಿದೆ. ಇದು ವ್ಯವಸ್ಥಿತವಾಗಿ ಸಾಕಾರಗೊಳ್ಳಬೇಕಾದರೆ ಎಲ್ಲ ಜನರ ಸಹಭಾಗಿತ್ವವೂ ಅಗತ್ಯವಾಗಿದೆ ಎಂದರು.

15ನೇ ವಾರ್ಡು ಹೆಚ್ಚು ವ್ಯವಹಾರಿಕ ಜನರೇ ಇರುವ ಬಡಾವಣೆಯಾಗಿದ್ದು, ವಾಸದ ಮನೆಗಳಿಗಿಂತ ವಾಣಿಜ್ಯ ಕಟ್ಟಡಗಳೇ ಹೆಚ್ಚಾಗಿವೆ. ಎಲ್ಲ ಸಮುದಾಯಕ್ಕೆ ಸೇರಿದ ವ್ಯಾಪಾರಸ್ಥರು ಇಲ್ಲಿದ್ದಾರೆ. ಸ್ಮಾರ್ಟ್‌ ಯೋಜನೆಯ ಲಾಭ ಈ ಬಡಾವಣೆಗೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಿಎಸ್‌ಐ ಬಡಾವಣೆ ನಾಗರಿಕ ಸಮಿತಿ ಅಧ್ಯಕ್ಷ ಜೆ.ಪಿ.ಜೈನ್ ಮಾತನಾಡಿ, ‘ಸ್ವಚ್ಛತೆಯಲ್ಲಿ ಸಿಎಸ್‌ಐ ಬಡಾವಣೆ ತುಮಕೂರು ನಗರದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ರೈಲ್ವೆ ನಿಲ್ದಾಣ ರಸ್ತೆ ಮಾತ್ರ ದುರಸ್ತಿ ಆಗಬೇಕಿದೆ. ಈ ರಸ್ತೆಯಲ್ಲಿ ಸರಗಳ್ಳತನ ಹೆಚ್ಚಾಗುತ್ತಿದ್ದು, ಸಿ.ಸಿ ಟಿವಿ ಕ್ಯಾಮರಾ ಅಳವಡಿಸಬೇಕು’ ಎಂದು ಶಾಸಕರಿಗೆ ಮನವಿ ಮಾಡಿದರು.

ಪಾಲಿಕೆ ನೂತನ ಸದಸ್ಯೆ ಗಿರಿಜಾ ಧನಿಯಾಕುಮಾರ್, ಮಾಜಿ ಸದಸ್ಯ ಕರುಣಾರಾಧ್ಯ ಮಾತನಾಡಿದರು. ಜೆಸಿ ಪೂರ್ವ ರಾಷ್ಟ್ರೀಯ ಘಟಕದ ಅಧ್ಯಕ್ಷ ಟಿ.ವಿ.ಎನ್.ಮೂರ್ತಿ, ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !