ಬುಧವಾರ, ನವೆಂಬರ್ 13, 2019
23 °C

‘ನನ್ನ ಫೋನೂ ಕದ್ದಾಲಿಕೆ ಆಗಿತ್ತು’

Published:
Updated:

ತುಮಕೂರು: ‘ಮೈತ್ರಿ ಸರ್ಕಾರ ಇದ್ದಾಗ ಫೋನ್ ಕದ್ದಾಲಿಕೆ ಆಗುತ್ತಿದೆ ಎಂಬ ಮಾಹಿತಿ ಇತ್ತು. ಸರ್ಕಾರದ ಅಂಗವಾಗಿದ್ದರೂ ನನ್ನ ಫೋನ್ ಕೂಡಾ ಕದ್ದಾಲಿಕೆ ಮಾಡಲಾಗುತ್ತಿತ್ತು. ವಿಷಯ ಗೊತ್ತಾದ ತಕ್ಷಣ ನನ್ನ ಫೋನ್ ನಂಬರ್ ಬದಲಿಸಿದೆ’ ಎಂದು ಮಾಜಿ ಸಚಿವರೂ ಆದ ಜೆಡಿಎಸ್‌ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಎಚ್.ಡಿ.ಕುಮಾರಸ್ವಾಮಿ ಅವರು ಫೋನ್ ಕದ್ದಾಲಿಕೆ ಮಾಡಿದ್ದರೆ ಅವರನ್ನು ಹಿಡಿದುಕೊಂಡು ಹೋಗಲಿ ಬಿಡಿ. ಬೇಡ ಎಂದು ಹೇಳುವವರು ಯಾರು? ಮಾಡಬಾರದ್ದನ್ನು ಮಾಡಿ ದುಡ್ಡು ಹೊಡೆದಿದ್ದರೆ ಅವರನ್ನೂ ಹಿಡಿದುಕೊಂಡು ಹೋಗುತ್ತಾರೆ. ಅವರನ್ನು ಹಿಡಿಯಬಾರದು ಎಂದು ಕಾನೂನು ಏನಾದರೂ ಇದೆಯಾ’ ಎಂದು ಪ್ರಶ್ನಿಸಿದರು.

‘ಡಿ.ಕೆ.ಶಿವಕುಮಾರ್ ನಮ್ಮ ಸಮಾಜದ ಮುಖಂಡ. ಅವರಿಗೆ ಅನ್ಯಾಯ ಆಗುತ್ತಿರುವಾಗ ಪ್ರತಿಭಟಿಸುವುದು ನಮ್ಮ ಕರ್ತವ್ಯ. ಅವರ ಮೇಲೆ ನಮಗೆ ಪ್ರೀತಿ ಇದ್ದಿದ್ದರಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆವು. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರೀತಿ ಇರಲಿಕ್ಕಿಲ್ಲ’ ಎಂದು ನುಡಿದರು.

ಪ್ರತಿಕ್ರಿಯಿಸಿ (+)