ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಟೆಯಿಂದ ದೈಹಿಕ-ಮಾನಸಿಕ ಸದೃಢತೆ

'ಕರಾಟೆ ಕಲರ್ ಬೆಲ್ಟ್ ಟೆಸ್ಟ್’ ಸಮಾರಂಭದಲ್ಲಿ ಕೆ.ಕೃಷ್ಣಮೂರ್ತಿ ಅಭಿಪ್ರಾಯ
Last Updated 27 ಏಪ್ರಿಲ್ 2019, 16:51 IST
ಅಕ್ಷರ ಗಾತ್ರ

ತುಮಕೂರು: ಕರಾಟೆಯ ನಿಯಮಿತ ಅಭ್ಯಾಸದಿಂದ ದೈಹಿಕ-ಮಾನಸಿಕ ಸದೃಢತೆ, ಏಕಾಗ್ರತೆಯ ಜೊತೆ ಹಲವಾರು ಸದ್ಗುಣಗಳನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ತುಮಕೂರಿನ ಸುಯೋಕುಕನ್ ಕರಾಟೆ ಸಂಸ್ಥೆಯ ಮುಖ್ಯ ಪರಿವೀಕ್ಷಕ ಕೆ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ನಗರದ ಜೆ.ಸಿ.ರಸ್ತೆಯ ಅಕ್ಕಮಹಾದೇವಿ ಸಮಾಜದಲ್ಲಿ ಅಂತರರಾಷ್ಟ್ರೀಯ ಸುಯೋಕುಕನ್ ಕರಾಟೆ ಸಂಸ್ಥೆಯ ತುಮಕೂರು ಶಾಖೆಯಿಂದ ಏರ್ಪಟ್ಟಿದ್ದ ‘ಕರಾಟೆ ಕಲರ್ ಬೆಲ್ಟ್ ಟೆಸ್ಟ್’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತಮ ಗುರುವಿನ ಬಳಿ ಪ್ರಾಮಾಣಿಕವಾಗಿ ಕರಾಟೆ ಅಭ್ಯಾಸ ಮಾಡಿದ ವಿದ್ಯಾರ್ಥಿ ಸಮಾಜಕ್ಕೆ ಪೂರಕವಾಗಿ ಜೀವಿಸುತ್ತಾನೆಯೇ ವಿನಃ ಎಂದಿಗೂ ಸಮಾಜಕ್ಕೆ ಕಂಟಕನಾಗುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ 27 ಮಂದಿ ವಿದ್ಯಾರ್ಥಿಗಳಿಗೆ ಬ್ಲ್ಯಾಕ್‌ಬೆಲ್ಟ್ ಮತ್ತು ಅರ್ಹತಾಪತ್ರ ವಿತರಿಸಲಾಯಿತು. ಈ ಕರಾಟೆ ಕಲರ್‌ಬೆಲ್ಟ್ ಪರೀಕ್ಷೆಯಲ್ಲಿ ಸುಮಾರು 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT