ಹಂದಿ ಕಡಿದು ಬಾಲಕನಿಗೆ ತೀವ್ರ ಗಾಯ

7
ಉಪ್ಪಾರಹಳ್ಳಿಯಲ್ಲಿ ಹಂದಿ ಹಾವಳಿಗೆ ಕಂಗೆಟ್ಟ ನಿವಾಸಿಗಳು, ಮಹಾನಗರ ಪಾಲಿಕೆ ಅಸಡ್ಡೆಗೆ ಆಕ್ರೋಶ

ಹಂದಿ ಕಡಿದು ಬಾಲಕನಿಗೆ ತೀವ್ರ ಗಾಯ

Published:
Updated:

ತುಮಕೂರು: ನಗರದ ಉಪ್ಪಾರಹಳ್ಳಿ ಬಡಾವಣೆ ಉರ್ದು ಶಾಲೆಯ ಹತ್ತಿರ 8ನೇ ಕ್ರಾಸ್‌ನಲ್ಲಿ ಭಾನುವಾರ ಮಂಜುನಾಥ್ ಎಂಬುವರ ನಾಲ್ಕು ವರ್ಷದ ಮಗ ವಿಜಯ್‌ಗೆ ಎಂಬ ಬಾಲಕನಿಗೆ ಹಂದಿ ಕಡಿದಿದೆ.

ಬಾಲಕನ ಹಣೆ, ಕೈಗಳಿಗೆ ಹಂದಿ ಕಡಿದು ಗಾಯಗೊಳಿಸಿದೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಬಾಲಕನ ಕಣ್ಣೇ ಹೋಗುವಷ್ಟರ ಮಟ್ಟಿಗೆ ಗಾಯವಾಗಿದೆ.

ಮಧ್ಯಾಹ್ನ 3 ಗಂಟೆ ಹೊತ್ತಿಗೆ ಮನೆ ಮುಂದೆ ಬಾಲಕ ಆಟ ಆಡುತ್ತಿದ್ದಾಗ ಏಕಾಏಕಿ ಹಂದಿ ಮಗನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ಬಾಲಕನ ತಂದೆ ಮಂಜುನಾಥ್ ಪ್ರಜಾವಾಣಿಗೆ ತಿಳಿಸಿದರು.

ಪೋಷಕರು, ಸ್ಥಳೀಯರ ಆಕ್ರೋಶ: ಬಡಾವಣೆಯಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದೆ. ಹಂದಿ ಜೋಗರಿಗೆ ಹೋಗಿ ಕೇಳಿದರೆ ನಮ್ಮವಲ್ಲ. ತಮ್ಮವಲ್ಲ ಎಂದು ಹೇಳುತ್ತಾರೆ. ಮಹಾನಗರ ಪಾಲಿಕೆ ಹಂದಿಗಳನ್ನು ಹಿಡಿದು ನಗರದಿಂದ ಹೊರ ಹಾಕುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಅವರು ಮಹಾನಗರ ಪಾಲಿಕೆಗೆ ಹಂದಿಗಳು, ಬೀದಿ ನಾಯಿಗಳನ್ನು ಹಿಡಿದು ಹೊರ ಹಾಕುವ ಅಧಿಕಾರ ಇದೆ ಎಂದು ಆದೇಶಿಸಿದ್ದರೂ ಪಾಲಿಕೆ ಆ ಕೆಲಸ ಮಾಡಿಲ್ಲ. ಕೇವಲ ಎಚ್ಚರಿಕೆ ಕುರಿತ ಪ್ರಕಟಣೆಗಳನ್ನು ಮಾತ್ರ ಹೊರಡಿಸುತ್ತಿದೆ. ಮಕ್ಕಳ ಜೀವಕ್ಕೆ ಅಪಾಯವಾದರೆ ಯಾರು ಹೊಣೆ ಎಂದು ಬಾಲಕನ ತಂದೆ ಮಂಜುನಾಥ್ ಪ್ರಶ್ನಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !