ಮಾಜಿ ಮೇಯರ್ ಕೊಲೆ ಪ್ರಕರಣ: ಶರಣಾಗತಿಗೆ ಮುನ್ನ ಬಂಧನಕ್ಕೆ ಸರ್ಕಸ್

6
ಕೋರ್ಟ್‌ಗೆ ಆರೋಪಿಗಳ ಶರಣಾಗತಿ ಸುಳಿವು, ಬಂಧನಕ್ಕೆ ಇಡೀ ದಿನ ಕೋರ್ಟ್ ಸುತ್ತಮುತ್ತ ಕಾದು ಕುಳಿತ ಪೊಲೀಸ್

ಮಾಜಿ ಮೇಯರ್ ಕೊಲೆ ಪ್ರಕರಣ: ಶರಣಾಗತಿಗೆ ಮುನ್ನ ಬಂಧನಕ್ಕೆ ಸರ್ಕಸ್

Published:
Updated:
Deccan Herald

ತುಮಕೂರು: ಮಹಾನಗರ ಪಾಲಿಕೆ ಸದಸ್ಯ ಹಾಗೂ ಮಾಜಿ ಮೇಯರ್ ರವಿಕುಮಾರ್ ಕೊಲೆ ಮಾಡಿದ ಆರೋಪಿಗಳು ನೇರವಾಗಿ ನ್ಯಾಯಾಧೀಶರ ಮುಂದೆಯೇ ಶರಣಾಗಲಿದ್ದಾರೆ ಎಂಬ ಸುಳಿವಿನ ಮೇರೆಗೆ ಶರಣಾಗತಿಗೂ ಮುನ್ನವೇ ಬಂಧಿಸಲು ಪೊಲೀಸರು ಪ್ರಯತ್ನ ನಡೆಸಿದರು.

ಕೋರ್ಟ್ ಅಕ್ಕಪಕ್ಕದ ರಸ್ತೆಗಳಲ್ಲಿ ಸೋಮವಾರ ಇಡೀ ದಿನ ಕಣ್ಣಿಟ್ಟಿದ್ದರು.

ಸರ್ಕಲ್ ಇನ್‌ ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್‌ಗಳು ಹಾಗೂ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಮಫ್ತಿಯಲ್ಲಿದ್ದರು. ಅಲ್ಲದೇ  ಹಿರಿಯ ಅಧಿಕಾರಿಗಳೂ ಕೋರ್ಟ್ ಮುಂಭಾಗದ ರಸ್ತೆಯಲ್ಲಿ ವಾಹನದಲ್ಲಿ ಒಂದೆರಡು ಸುತ್ತು ಹಾಕಿದರು.

ಆರೋಪಿಗಳು ಒಂದು ವೇಳೆ ಕೋರ್ಟ್‌ಗೆ ಹಾಜರಾಗಲು ಬಂದರೆ ಕೈಗೊಳ್ಳಬೇಕಾದ ಕ್ರಮಗಳು, ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಿರ್ದೇಶನ ನೀಡಿದರು.

ಕೋರ್ಟ್ ಮುಂಭಾಗದ ರಸ್ತೆಗಳಲ್ಲಿ ಪೊಲೀಸ್ ಜೀಪುಗಳು ನಿಂತಿದ್ದವು. ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸರು ಮಫ್ತಿಯಲ್ಲಿ ಸುತ್ತಾಡಿದರು. ಕೋರ್ಟ್‌ನ ಯಾವುದೇ ದಿಕ್ಕಿಗೇ ಹೋದರೂ ಹೊರಗಡೆ ಪೊಲೀಸರು ಕಂಡರು. ಸಹಜವಾಗಿ ಸಾರ್ವಜನಿಕರು, ವಕೀಲರಲ್ಲಿ ಕುತೂಹಲ ಸೃಷ್ಟಿಸಿತು.

ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕೋರ್ಟ್‌ಗೆ ಆರೋಪಿಗಳು ಹಾಜರಾಗುತ್ತಾರೆ ಎಂಬ ಮಾಹಿತಿ ಆಧಾರದ ಮೇಲೆ ಪೊಲೀಸರು ಕೋರ್ಟ್ ಆವರಣದ ಸುತ್ತಮುತ್ತ ಎಚ್ಚರಿಕೆ ವಹಿಸಿದ್ದರು. ಆದರೆ, ಸಂಜೆ 7 ಗಂಟೆಯಾದರೂ ಆರೋಪಿಗಳು ಕೋರ್ಟ್‌ ನತ್ತ ಸುಳಿಯದೇ ಇದ್ದಾಗ ಪೊಲೀಸರು ನಿರ್ಗಮಿಸಿದರು.

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !