ಸಹೋದ್ಯೋಗಿಗೆ ಸೀಮಂತ ಮಾಡಿ ಮಾದರಿಯಾದ ಪೊಲೀಸರು

ಭಾನುವಾರ, ಮೇ 26, 2019
28 °C

ಸಹೋದ್ಯೋಗಿಗೆ ಸೀಮಂತ ಮಾಡಿ ಮಾದರಿಯಾದ ಪೊಲೀಸರು

Published:
Updated:
Prajavani

ಪಟ್ಟನಾಯಕನಹಳ್ಳಿ: ಇಲ್ಲಿನ ಪೊಲೀಸರು ಮೊದಲಬಾರಿಗೆ ತಮ್ಮ ಸಹದ್ಯೋಗಿಯ ಸೀಮಂತ ಕಾರ್ಯಕ್ರಮ ಆಯೋಜಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಎರಡು ವರ್ಷಗಳಿಂದ ಇಲ್ಲಿನ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೆಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಶೀಲಾ ಅವರು ಗರ್ಭವತಿಯಾಗಿದ್ದು ತವರುಮನೆಯಲ್ಲಿ ಶಾಸ್ತ್ರ ಮಾಡಲು ತಾಯಿ ಇಲ್ಲದಿರುವ ವಿಚಾರ ತಿಳಿದ ಸಬ್ಇನ್‌ಸ್ಪೆಕ್ಟರ್ ವಿ.ನಿರ್ಮಲ ಅವರು ತಮ್ಮ ಸಿಬ್ಬಂದಿ ಜೊತೆಗೂಡಿ ಮಡಿಲು ತುಂಬುವ ಕಾರ್ಯ ನೆರವೇರಿಸಿದರು.

ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಸಬ್ಇನ್‌ಸ್ಪೆಕ್ಟರ್ ಸೇರಿದಂತೆ ಐದು ಮಹಿಳೆಯರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಕೆಲಸದ  ಒತ್ತಡದಲ್ಲೂ ಸಿಬ್ಬಂದಿಯ ಆಸೆ ಈಡೇರಿಸಿ ಇಲ್ಲಿನ ಸಿಬ್ಬಂದಿ ಮಾದರಿಯಾಗಿದ್ದಾರೆ.

ಎಎಸ್ಐಗಳಾದ ಭಾರತಿ, ಧೃವಚಾರ್, ಶ್ರೀನಿವಾಸ್, ಸಿಬ್ಬಂದಿ ಜ್ಯೋತಿ, ರೋಜಾ, ಶ್ರೀನಿವಾಸಲು, ಹನುಮಂತಚಾರ್, ಕಾಂತರಾಜ್, ಶಿವಕುಮಾರ್, ಜುಂಜಣ್ಣ, ತಿಪ್ಪೇಸ್ವಾಮಿ, ಸುನೀಲ್, ಸಿದ್ರಾಮ, ತಿಮ್ಮಪ್ಪ, ರಂಗನಾಥ್, ಯತೀಶ್, ಮಂಜುನಾಥ್, ರೇವಣಸಿದ್ದ, ಸಂಜುಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !