ಹುಳಿಯಾರು (ತುಮಕೂರು): ವಿಚಾರಣೆಗಾಗಿ ಗುರುವಾರ ಹುಳಿಯಾರು ಪೊಲೀಸ್ ಠಾಣೆಗೆ ಕರೆ ತಂದಿದ್ದ ವ್ಯಕ್ತಿ ಠಾಣೆ ಮುಂದೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

‘ಪೊಲೀಸರು ಥಳಿಸಿದ್ದರಿಂದ ಜೀವ ಹೋಗಿದೆ. ಇದು ಲಾಕ್ಅಪ್ ಡೆತ್ ಪ್ರಕರಣ. ಸಿಐಡಿ ತನಿಖೆಗೆ ವಹಿಸಬೇಕು’ ಎಂದು ಗ್ರಾಮಸ್ಥರು ತಡರಾತ್ರಿ ಠಾಣೆ ಬಳಿ ಶವವಿಟ್ಟು ಪ್ರತಿಭಟಿಸಿದರು.

ಯಳನಡು ಗ್ರಾಮದ ಗುಡಿಗೌಡ ಕಾಂತರಾಜು (50) ಮೃತರು. ಇಸ್ಪೀಟ್ ಆಡುತ್ತಿದ್ದ ಅವರನ್ನು ಪೊಲೀಸರು ಇನ್ನೂ ನಾಲ್ವರ ಸಮೇತ ಹುಳಿಯಾರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.

ಠಾಣೆಯಲ್ಲಿ ಕಾಂತರಾಜು ಅಸ್ವಸ್ಥರಾಗಿದ್ದರು. ಹೊರ ಬರುತ್ತಿದ್ದಂತೆಯೇ ಠಾಣೆ ಬಳಿಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

‘ಸಂಜೆ 5.30ರಿಂದ ರಾತ್ರಿ 8 ಗಂಟೆಯ ತನಕ ಠಾಣೆಯಲ್ಲಿ ಉಳಿಸಿಕೊಂಡಿದ್ದರು. ಕಾಂತರಾಜು ಅಸ್ವಸ್ಥರಾಗಿ ಠಾಣೆಯಲ್ಲಿ ಮಲಗಿದ್ದರು. ಪೊಲೀಸರು ಕುಡಿಯಲು ನೀರೂ ಕೊಡಲಿಲ್ಲ. ಮಲಗಿದ್ದ ಕಾಂತರಾಜುಗೆ ಪೊಲೀಸರು ಕಾಲಿನಿಂದ ಒದ್ದು ಎಬ್ಬಿಸಿದರು. ಅಲ್ಲಿಂದ ಹೊರ ಬರುತ್ತಿದ್ದಂತೆಯೇ ಅವರು ಕುಸಿದು ಬಿದ್ದರು. ಪೊಲೀಸರು ತಕ್ಷಣಕ್ಕೆ ಸ್ಪಂದಿಸಲಿಲ್ಲ. ನಾವು ಕೂಗಾಡಿದ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಾಹನ ತರಿಸಿದರು’ ಎಂದು ಕಾಂತರಾಜು ಜತೆಗೆ ಠಾಣೆಗೆ ಹೋಗಿದ್ದ ಸತೀಶ್ ಆರೋಪಿಸಿದರು.

ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಠಾಣೆಗೆ ಭೇಟಿ ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಧ್ಯರಾತ್ರಿ ಠಾಣೆಗೆ ತೆರಳಿ ಪರಿಸ್ಥಿತಿ ಪರಿಶೀಲಿಸಿದರು.

ಸಿಐಡಿ ತನಿಖೆ: ಪರಮೇಶ್ವರ

‘ಠಾಣೆಗೆ ಕರೆ ತಂದ ನಂತರ ಸಾವು ಸಂಭವಿಸಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಸಾವಿಗೆ ಕಾರಣ ಏನು ಎಂಬುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಯುತ್ತದೆ. ಸಿಐಡಿಗೆ ಕೊಟ್ಟರೆ ಎಲ್ಲ ಮಾಹಿತಿ ಗೊತ್ತಾಗಲಿದೆ. ಪೊಲೀಸರು ಹೊಡೆದಿದ್ದರಿಂದ ಮೃತಪಟ್ಟಿದ್ದಾರೆ ಎಂಬುವುದು ಖಚಿತವಾದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದರು.

ಠಾಣೆಗೆ ಕರೆ ತಂದ ನಂತರ ಸಾವು ಸಂಭವಿಸಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗುವುದು. ಸಾವಿಗೆ ಕಾರಣ ಏನು ಎಂಬುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಯುತ್ತದೆ.
–ಜಿ.ಪರಮೇಶ್ವರ, ಗೃಹಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.