ಬುಧವಾರ, ನವೆಂಬರ್ 20, 2019
27 °C

ರೌಡಿ ಮೋಹನ್ ಹತ್ಯೆ; ಆರೋಪಿ ರೌಡಿಶೀಟರ್ ರಾಜನ ಕಾಲಿಗೆ ಪೊಲೀಸರ ಗುಂಡೇಟು

Published:
Updated:
Prajavani

ತುಮಕೂರು: ನಗರದ ಹೊರವಲಯದ ಬೆಳಗುಂಬ ಬಳಿ ಶುಕ್ರವಾರ ತಡರಾತ್ರಿ ನಡೆದ ರೌಡಿಶೀಟರ್ ಮೋಹನ್ ಕುಮಾರ್ ಅಲಿಯಾಸ್ ಚೊಟ್ಟ ಕುಮಾರ್ ಹತ್ಯೆ ಪ್ರಕರಣದ ಆರೋಪಿ ಟೆಂಪರ್ ರಾಜನ ಬಲಗಾಲಿಗೆ ಕ್ಯಾತ್ಸಂದ್ರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಮೋಹನ್ ಕುಮಾರ್ ತುಮಕೂರಿನ ವಿಜಯನಗರ ನಿವಾಸಿ. ನಗರ ವಿವಿಧ ಠಾಣೆಗಳಲ್ಲಿ ಆತನ ವಿರುದ್ಧ ಕೊಲೆ, ಕಳವು, ದರೋಡೆ ಪ್ರಕರಣ ದಾಖಲಾಗಿತ್ತು. ಸ್ನೇಹಿತ ಟೆಂಪರ್ ರಾಜ ಮತ್ತು ಮೋಹನ್ ನಡುವೆ ಜಗಳ ಸಂಭವಿಸಿತ್ತು. ರಾಜ, ಮೋಹನ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿ ಆಗಿದ್ದ. ಆರೋಪಿ ಬಂಧನಕ್ಕೆ ಕ್ಯಾತ್ಸಂದ್ರ ಸಿಪಿಐ ಶ್ರೀಧರ್ ಬಲೆ ಬೀಸಿದ್ದರು.

ವಡ್ಡರಹಳ್ಳಿ ಬಳಿ ಆರೋಪಿಯ ಸುಳಿವು ಪೊಲೀಸರಿಗೆ ದೊರೆತಿತ್ತು. ಸಂಜೆ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಕಾನ್‌ಸ್ಟೆಬಲ್ ರಮೇಶ್ ಎಂಬುವವರು ಗಾಯಗೊಂಡಿದ್ದಾರೆ. ಆಗ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಪ್ರತಿಕ್ರಿಯಿಸಿ (+)